ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಮುಂಬರುವಂತ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಭರ್ಜರಿ ತಯಾರಿ ನಡೆಸಿದೆ. ಪಕ್ಷದಿಂದ ಟಿಕೆಟ್ ಗಾಗಿ ಮುಕ್ತವಾಗಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಕೂಡ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ( Congress ) ಅರ್ಜಿ ಸಲ್ಲಿಸಿದ್ದಾರೆ.
ಮನೆ ನಿರೀಕ್ಷೆಯಲ್ಲಿದ್ದ ಜನರಿಗೆ ಗುಡ್ ನ್ಯೂಸ್: ‘ಬೆಂಗಳೂರು ಅಮೃತೋತ್ಸವ ಮನೆ’ ಯೋಜನೆಗೆ ಅರ್ಜಿ ಆಹ್ವಾನ
ಈ ಕುರಿತಂತೆ ಕಾಂಗ್ರೆಸ್ ಪಕ್ಷದಿಂದ ಮಾಹಿತಿ ನೀಡಲಾಗಿದ್ದು, ಇಂದು ಕೆ.ಪಿ.ಸಿ.ಸಿ ಅದೇಶದ ಮೇರೆಗೆ ಅಜಿ೯ ಸಲ್ಲಿಸಲು ಕೊನೆಯ ದಿನವಾಗಿದ್ದ ಇಂದು ಕನಕಪುರ ಕ್ಷೇತ್ರಕ್ಕೆ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಪರವಾಗಿ ಎಂ.ಎಲ್ ಸಿ ರವಿ ರವರು ಕೆ.ಪಿ.ಸಿ.ಸಿ ಖಜಾಂಚಿಗಳಾದ ವಿನಯ್ ಕಾತಿ೯ಕ್ ರವರು ಕನಕಪುರ ಬ್ಲಾಕ್ ಅಧ್ಯಕ್ಷರುಗಳಾದ ವಿಜಯ್ ದೇವ್ ಮತ್ತು ಮುೂತಿ೯ ರವರು ಹಾಗು ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷರಾದ ಕೆಂಪರಾಜು ಹಾಗು ಕೆ.ಪಿ.ಸಿ.ಸಿ ಮಾದ್ಯಮ ವಿಭಾಗದ ಸಂಯೋಜಕರಾದ ಜಿ.ಸಿ ರಾಜುರವರು ಕೆ.ಪಿ.ಸಿ.ಸಿ ಕಚೇರಿ ಕಾಯ೯ದಶಿ೯ಗಳಾದ ನಾರಾಯಣ್ ರವರಿಗೆ ಅಜಿ೯ ಸಲ್ಲಿಸಿಲಾಯಿತು ಎಂದು ಹೇಳಿದೆ.