ಬೆಂಗಳೂರು: ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
BIGG NEWS: ಸಾಮಾಜಿಕ ಮಾಧ್ಯಮ ಪ್ರಭಾವ ಬೀರುವವರಿಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಇಲ್ಲಿಯವರಿಗೆ ಎಲ್ಲರಿಗೂ ಕೊಟ್ಟ ಗೌರವ ಉಮೇಶ್ ಕತ್ತಿ ಅವರಿಗೂ ಕೊಡಬೇಕು. ಒಂದು ವೇಳೆ ಆ ರೀತಿಯಾಗಿದ್ದರೆ ಅದನ್ನ ಸರಿಪಡಿಸಿಕೊಳ್ಳಬೇಕು. ಅವರ ಮತ್ತು ನನ್ನ ನಡುವೆ ಒಡನಾಟ ಚೆನ್ನಾಗಿದೆ. ಅವರ ಸಾವಿನಿಂದ ನನಗೆ ತುಂಬಾ ನೋವು ಆಗಿದೆ. ರಾಜಕೀಯಕ್ಕೆ ತುಂಬಲಾರದಂತಹ ನಷ್ಟ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇನ್ನು ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಸ್ವ-ಗ್ರಾಮದತ್ತ ಹೊರಟಿದೆ. ವಿಶ್ವರಾಜ್ ಸಕ್ಕರೆ ಕಾರ್ಖಾನೆ ಅಂತಿಮ ದರ್ಶನ ಮಾಡಲಾಗಿತ್ತು. ನಂತರ ಹುಟ್ಟೂರಿನ ಕಡೆ ಹೊರಟಿದೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನೇನು ಕೆವೇ ಕ್ಷಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಲಿಂಗಾಯುತ ಸಮುದಾಯದಂತೆ ವಿಧಿವಿಧಾನಗಳು ನೆರೆವೇರಲಿದೆ.