ಕೊಪ್ಪಳ : ಕೊಪ್ಪಳದ ಕನಕಗಿರಿ ತಾಲ್ಲೂಕಿನ ವರಣಖೇಡ ಗ್ರಾಮದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನ ವಿರುದ್ಧ ದೂರು ನೀಡಿದ ಮರುದಿನವೇ ತಂದೆ ಸಾವಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಗ ಹಾಗೂ ಸೊಸೆ ವಿರುದ್ಧ ಆಸ್ತಿಗಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹೌದು ವೆಂಕೋಬಾ ಹಂಚಿನಾಳ (50) ಮೃತ ತಂದೆ. ಆಸ್ತಿಗಾಗಿ ತಂದೆಗೆ ಮಗ ವಿಷ ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ವೆಂಕೋಬಾ ಸಾವಿಗೆ ಆತನ ಮಗ ಮತ್ತು ಸೊಸೆ ಕಾರಣ ಎಂದು ಕನಕಗಿರಿ ಪೊಲೀಸ್ ಠಾಣೆಗೆ ವೆಂಕೋಬಾ ತಾಯಿ ಸೂರಮ್ಮ ದೂರು ನೀಡಿದ್ದಾರೆ.ವಿಷ ಸೇವಿಸಿ ವೆಂಕೋಬಾ ಮೃತ ಪಟ್ಟಿದ್ದಾರೆ, ಆದರೆ ಇದೊಂದು ಕೊಲೆ ಎನ್ನುವುದು ಮೃತ ವೆಂಕೋಬಾ ತಾಯಿಯ ಆರೋಪವಾಗಿದೆ.
ಇನ್ನೂ ಈ ಸಂಬಂಧ ಮೃತನ ತಾಯಿ ಸೂರಮ್ಮ ಅವರು ದೂರು ದಾಖಲಿಸಿದ್ದಾರೆ. ಹತ್ತು ಎಕರೆ ಆಸ್ತಿ ವಿಚಾರಕ್ಕೆ ಆಗಾಗ ವೆಂಕೋಬಾ ಹಾಗೂ ಆತನ ಮಗನ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ತಂದೆಯನ್ನ ವಿಷ ಹಾಕಿ ಕೊಲೆ ಮಾಡಿದ್ದಾನೆ. ನನ್ನ ಮಗನ ಸಾವಿಗೆ ಸೊಸೆ, ಮೊಮ್ಮಗ ಹಾಗೂ ಮೊಮ್ಮಗನ ಹೆಂಡತಿ ಕಾರಣ ಎಂದು ದೂರು ದಾಖಲಿಸಿದ್ದಾರೆ.








