ಉಡುಪಿ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದಂತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ( Kollur Mookambika Temple ) ಸಲಾಂ ಮಂಗಳಾರತಿ ಪದ್ದತಿ ಇದೆ ಎನ್ನಲಾಗಿತ್ತು. ಆದ್ರೇ ಈ ರೀತಿಯ ಯಾವುದೇ ಸಲಾಂ ಮಂಗಳಾರತಿ ಪದ್ದತಿ ಇಲ್ಲ ಎಂಬುದಾಗಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.
ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದೆ: ರೋಚಕ ಸಂಗತಿ ಬಿಚ್ಚಿಟ್ಟ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಕಳೆದ 40 ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತನಾಗಿದ್ದೇನೆ. ಅಲ್ಲದೇ 10 ವರ್ಷಗಳ ಕಾಲ ದೇವಸ್ಥಾನ ಆಡಳಿತ ಮಂಡಳಿಯ ಮೋಕ್ತೇಸರನಾಗಿದ್ದೆ. ನನಗೆ ತಿಳಿದಿರುವಂತೆ ಮೂಕಾಂಬಿಕೆ ದೇವಸ್ಥಾನದಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಇಲ್ಲ ಎಂಬುದಾಗಿ ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಸಂಜೆ ನಡೆಸುವಂತ ಮಂಗಳಾರತಿ ಪ್ರದೋಷ ಪೂಜೆಯಾಗಿದೆ. ಇದರ ಹೊರತಾಗಿ ಇದು ಸಲಾಂ ಮಂಗಳಾರತಿ ಎಂದು ಹೇಳುವುದಕ್ಕೆ ಯಾವುದೇ ಲಿಖಿತ ದಾಖಲೆಗಳಿಲ್ಲ. ಅಲ್ಲದೇ ಸಂಜೆಯ ಪ್ರದೋಷ ಪೂಜೆ ಎಂದಿಗೂ ಸಲಾಂ ಮಂಗಳಾರತಿ ಆಗುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದರು.
BIGG NEWS : ಮುರುಘಾಮಠದ ಫೋಟೋಗಳ ಕಳ್ಳತನ ಕೇಸ್ ನಲ್ಲಿ’SJM’ ಸಂಸ್ಥೆಯ ನೌಕರರು ಭಾಗಿ ; ಮಹಾಂತ ರುದ್ರೇಶ್ವರಶ್ರೀ ಆರೋಪ