ಕೋಲಾರ : ತಾಲೂಕು ಕಚೇರಿಯಲ್ಲಿ 2 ಸಾವಿರ ಲಂಚ ಸ್ವೀಕರಿಸುವಾಗ FDA ಒಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಚೇರಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಮಾಡಿದ್ದು ಲಂಚ ಸ್ವೀಕರಿಸುವಾಗ FDA ಅಧಿಕಾರಿ ತೇಜಸ್ ಭೂಷಣ ಲೋಕಾಯುಕ್ತ ಅಧಿಕಾರಿಗಳ ಬೆಲೆಗೆ ಬಿದ್ದಿದ್ದಾನೆ.2022 ರಲ್ಲಿ ಮಳೆಯಿಂದ ಕೂಸಿದಿದ್ದ ಮನೆಗೆ ಪರಿಹಾರ ನೀಡಲು ಲಂಚ ಕೇಳಿದ್ದ ಎಂದು ಆರೋಪಿಸಲಾಗಿದೆ.
ಈ ಕುರಿತು ಗೊಲ್ಲಹಳ್ಳಿಯ ನಾರಾಯಣ ಸ್ವಾಮಿ ಬಳಿ 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಂಗಾರಪೇಟೆ ತಾಲೂಕಿನ ಗೊಲ್ಲಹಳ್ಳಿಯ ನಿವಾಸಿ ನಾರಾಯಣಸ್ವಾಮಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು ಮೊದಲ ಕಂತಿನ 90,000 ಹಣ ಬಿಡುವಡಿಗೆ ತೇಜಸ್ ಭೂಷಣ್ ಲಂಚದ ಬೇಡಿಕೆ ಇಟ್ಟಿದ್ದ. ಇದೀಗ ಲೋಕಾ ಬಲೆಗೆ ಬಿದ್ದಿದ್ದಾನೆ. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸದ್ಯ ತೇಜಸ್ ಭೂಷಣನನ್ನು ಬಂಧಿಸಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.