ಬೆಂಗಳೂರು: ರಾಜಸ್ಥಾನದ ಜೈಪುರದಲ್ಲಿನ ಕ್ಯಾಸಿನೋದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದಂತ ವೇಳೆಯಲ್ಲಿ, ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿದ್ದರು. ಅಶ್ಲೀಲ ನೃತ್ಯ, ಪಾರ್ಟಿಯಲ್ಲಿ ತೊಡಗಿದ್ದಂತ ಕರ್ನಾಟಕದ ಕೆಎಎಸ್ ಅಧಿಕಾರಿ ಸಹಿತ 7 ಮಂದಿಯನ್ನು ಬಂಧಿಸಲಾಗಿತ್ತು. ಹೀಗೆ ಬಂಧನವಾಗಿದ್ದಂತ ಕೋಲಾರದ ಸೈಬರ್ ಕೈಂ ಇನ್ಸ್ ಪೆಕ್ಟರ್ ಅಂಜಿನಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ರಾಜಸ್ಥಾನದ ಜೈಪುರದ ಫಾರ್ಮ್ ಹೌಸ್ ಒಂದರಲ್ಲಿ ಜೂಜಾಟ, ಅಶ್ಲೀಲ ಪಾರ್ಟಿ ನಡೆಯುತ್ತಿದ್ದಂತ ವಿಚಾರ ತಿಳಿದಂತ ಸೈಬರ್ ಕ್ರೈಂ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಕರ್ನಾಟಕದ ಕೆ ಎಎಸ್ ಅಧಿಕಾರಿ ಸಹಿತ 7 ಮಂದಿ ಬಂಧಿಸಲಾಗಿದೆ.
BREAKING NEWS: ಶಿವಮೊಗ್ಗದ ಶಿಕಾರಿಪುರದಲ್ಲಿ ಕ್ರೀಡಾಕೂಟದ ವೇಳೆ ಜಟಾಪಟಿ, ಸ್ಥಳದಲ್ಲಿ ಬಿಗುವಿನ ವಾತಾವರಣ
ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದಂತ ಕೆ ಎಎಸ್ ಅಧಿಕಾರಿಗಳು ಸಹಿತ ಹಲವು ಅಧಿಕಾರಿಗಳು, ಜೂಜಾಟ, ಅಶ್ಲೀಲ ಪಾರ್ಟಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದಂತ ದಾಳಿಯಲ್ಲಿ ಸಿಕ್ಕಿಬಿದ್ದಿರೋದಾಗಿ ತಿಳಿದು ಬಂದಿದೆ.
BIG NEWS: ಮಂಡ್ಯದಲ್ಲಿ ಬಿಜೆಪಿ, RSS ಮುಖಂಡರಿಗೆ ‘ಹನಿಟ್ರ್ಯಾಪ್’: ಲಕ್ಷ ಲಕ್ಷ ಪೀಕಿದ ‘ಯುವತಿ ಅರೆಸ್ಟ್’
ಕ್ಯಾಸಿನೋ ಪಾರ್ಟಿಯಲ್ಲಿ ತೊಡಗಿದ್ದಂತ ವೇಳೆಯಲ್ಲಿ ಕೆಎಎಸ್ ಅಧಿಕಾರಿ ಶ್ರೀನಾಥ್ ಸೇರಿದಂತೆ 7 ಮಂದಿಯನ್ನು, ಜೈಪುರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೆ ಎಎಸ್ ಅಧಿಕಾರಿ ಶ್ರೀನಾಥ್, ಕೋಲಾರದ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಅಂಜಿನಪ್ಪ, ಕೋಲಾರ ನಗರಸಭೆಯ ಸದಸ್ಯ ಸತೀಶ್, ಶಿಕ್ಷಕ ರಮೇಶ್, ಆರ್ ಟಿಓ ಇಲಾಖೆ ಸಿಬ್ಬಂದಿ ಶಬರೀಶ್, ವ್ಯಾಪಾರಿ ಸುಧಾಕರ್ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಈ ಮೂಲಕ ಕ್ಯಾಸಿನೋ ರೇಡ್ ನಲ್ಲಿ ರಾಜ್ಯದ 7 ಮಂದಿ ಸರ್ಕಾರಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.
ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದು ತಪ್ಪಲ್ಲ: ಸಿದ್ಧರಾಮಯ್ಯ ಬೆಂಬಲಕ್ಕೆ ನಿಂತ ಪ್ರಮೋದ್ ಮುತಾಲಿಕ್
ಈ ಪ್ರಕರಣದ ಹಿನ್ನಲೆಯಲ್ಲಿ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಟ್ಟು ಹೋದಂತ ಕಾರಣದಿಂದ ಕೋಲಾರ ಸೈಬರ್ ಕ್ರೈಂ ಠಾಣೆಯ ಇನ್ಸ್ ಪೆಕ್ಟರ್ ಅಂಜಿನಪ್ಪನನ್ನು ಕೇಂದ್ರ ವಿಭಾಗದ ಐಜಿಪಿ ಚಂದ್ರಶೇಖರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.