ನವದೆಹಲಿ : ಟೀಮ್ ಇಂಡಿಯಾದ ದಂತಕತೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ಎರಡನೇ ಇನ್ನಿಂಗ್ಸ್ಗೆ ತಯಾರಿ ಆರಂಭಿಸಿದ್ದಾರೆ. ಕ್ರಿಕೆಟ್ ನಂತ್ರ ಅವರು ರೆಸ್ಟೋರೆಂಟ್ ವ್ಯವಹಾರವನ್ನ ಪ್ರವೇಶಿಸಲು ತಯಾರಿ ನಡೆಸುತ್ತಿದ್ದು, ಮುಂಬೈನಲ್ಲಿ ತಮ್ಮ ರೆಸ್ಟೋರೆಂಟ್ ವ್ಯವಹಾರವನ್ನ ಪ್ರಾರಂಭಿಸಲಿದ್ದಾರೆ. ಇದಕ್ಕಾಗಿ, ಒಂದು ಸ್ಥಳವನ್ನ ಸಹ ಕಂಡುಕೊಂಡಿರುವ ಕೊಹ್ಲಿ, ಖ್ಯಾತ ಗಾಯಕ ಕಿಶೋರ್ ಕುಮಾರ್ ಅವ್ರ ಬಂಗಲೆಯಲ್ಲಿ ತಮ್ಮ ರೆಸ್ಟೋರೆಂಟ್ʼನ್ನ ತೆರೆಯಲಿದ್ದಾರೆ. ಇನ್ನೀದನ್ನ ಕಿಶೋರ್ ಕುಮಾರ್ ಅವ್ರ ಮಗ ಅಮಿತ್ ಕುಮಾರ್ ಸ್ವತಃ ದೃಢ ಪಡಿಸಿದ್ದಾರೆ.
ಕಿಶೋರ್ ಕುಮಾರ್ ಬಂಗಲೆ ಮುಂಬೈನ ಜುಹು ತಾರಾ ರಸ್ತೆಯಲ್ಲಿದೆ. ಈ ಬಂಗಲೆಯ ಹೆಸರು ‘ಗೌರ್ ಕುಂಜ್’ ಅಂತಾ. ಕಿಶೋರ್ ಕುಮಾರ್ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಈಗ ವಿರಾಟ್ ಈ ಬಂಗಲೆಯನ್ನ 5 ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ಬಂಗಲೆಯನ್ನ ರೆಸ್ಟೋರೆಂಟ್ ಆಗಿ ಪರಿವರ್ತಿಸುವ ಕೆಲಸವೂ ಭರದಿಂದ ಸಾಗಿದೆ. ಈ ರೆಸ್ಟೋರೆಂಟ್ ಮುಂದಿನ ತಿಂಗಳೊಳಗೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ.