ಕೊಡಗು : ಆಹಾರವನ್ನು ಅರಸಿ ಕಾಡಿನಿಂದ ಹುಲಿ ಒಂದು ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಹೌದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಅಕ್ಕಪಕ್ಕ ಹುಲಿ ಸಂಚರಿಸಿದ್ದು, ಈ ಕುರಿತು ಹುಲಿಯ ಹೆಜ್ಜೆಗಳು ಸಹ ಮೂಡಿವೆ. ಇದರಿಂದ ಮಕ್ಕಳು ಶಾಲೆಗೆ ಬರುವಾಗ ಮತ್ತು ಶಾಲೆಯಿಂದ ಮನೆಗೆ ಹೋಗುವಾಗ ಭಯದಲ್ಲಿ ಓಡಾಡುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಹುಲಿ ಭಯ ಶುರುವಾಗಿದೆ. ವಿರಾಜಪೇಟೆಯ ಚಂಬೇಬೆಳ್ಳೂರಿನಲ್ಲಿ ಹುಲಿ ಸಂಚರಿಸಿದೆ. ಸರ್ಕಾರಿ ಶಾಲೆಯ ಪಕ್ಕದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಗ್ರಾಮದ ನಾಲ್ಕು ಕಡೆಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಹುಲಿ ಒಂದು ಹೊಸ ಒಂದು ಕರು ಕೊಂದಿದೆ. ಹುಲಿಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.