ಕೊಡಗು : ಕೊಡಗಿನಲ್ಲಿ ಪ್ರವಾಸಿಗರಿಗೆ ಹುಡುಗಿಯರು ಮತ್ತು ಆಂಟಿಯರು ಡೇಟಿಂಗ್ ಮಾಡಲು ಲಭ್ಯವಿದ್ದಾರೆ ಅಂತ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನ ಕೊಡಗು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ನಿವಾಸ ನಾಗಪ್ಪ (26) ಬಂಧಿತ ಯುವಕ. ಕಿಡಿಗೇಡಿ, ಮಡಿಕೇರಿ ನಗರದ ವ್ಯಾಪ್ತಿಯಲ್ಲಿ ಆಂಟಿಯರು, ಹುಡುಗಿಯರು ಡೇಟಿಂಗ್‌ಗೆ ಸಿಕ್ತಾರೆ, ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮೊಬೈಲ್ ನಂಬರ್ ಕೂಡ ಹಾಕಿದ್ದ. ಇದರ ವಿರುದ್ಧ ಪ್ರವಾಸಿಗರು ಮಾತ್ರವಲ್ಲದೇ ಕೊಡಗಿನ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.