Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

02/05/2026 11:42 AM

ಭಾರತದಲ್ಲಿ ಹೊಸಬರಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್ 5 ಕಾನೂನು ಸಂಸ್ಥೆಗಳಿವು!

02/05/2026 11:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗದಲ್ಲಿ ಮೃತ ಸಂಕೇತ ಪೋಷಕರಿಗೆ 15 ಲಕ್ಷ ಪರಿಹಾರಧನ ನೀಡಿ ಸಿಎಂ ಸಿದ್ಧರಾಮಯ್ಯ ಸಾಂತ್ವನ
KARNATAKA

ಶಿವಮೊಗ್ಗದಲ್ಲಿ ಮೃತ ಸಂಕೇತ ಪೋಷಕರಿಗೆ 15 ಲಕ್ಷ ಪರಿಹಾರಧನ ನೀಡಿ ಸಿಎಂ ಸಿದ್ಧರಾಮಯ್ಯ ಸಾಂತ್ವನ

By kannadanewsnow0901/03/2026 6:35 PM

ಶಿವಮೊಗ್ಗ : ಇತ್ತೀಚಿಗೆ ಅಹಿತಕರ ಘಟನೆಯೊಂದರಲ್ಲಿ ಮೃತನಾದ ವಿದ್ಯಾರ್ಥಿ ಸಂಕೇತ್‌ನ ಪೋಷಕರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಸಾಂತ್ವನ ಹೇಳಿ ಸಂತೈಸಿದರಲ್ಲದೇ 15ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ವಿತರಿಸಿದರು.

ಅವರು ಇಂದು ತರೀಕೆರೆಯ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಅಮೇರಿಕಾ ಮದ್ಯಪ್ರಾಚ್ಯ ರಾಷ್ಟ್ರಗಳ ನಡುವೆ ತಾರಕಕ್ಕೇರಿರುವ ಯುದ್ಧದಿಂದಾಗಿ ಇರಾನ್‌ನ ಮುಖ್ಯಸ್ಥ ಮೃತರಾಗಿರುವ ವಿಷಯವನ್ನು ಕೇಳಿ ತಿಳಿದಿದ್ದೇನೆ. ಈ ಘಟನೆ ಸಂಭವಿಸಬಾರದಾಗಿತ್ತು. ಮೃತ ಖಮೈನಿ ಅವರ ಆತ್ಮಕ್ಕೆ ಚಿರಶಾಂತಿ ಬಯಸುವುದಾಗಿ ತಿಳಿಸಿದ ಅವರು, ಅಮೇರಿಕಾ ಅ‍ಧ್ಯಕ್ಷರು ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ವಿಶ್ವಶಾಂತಿಯ ಬಗ್ಗೆ ಸದಾ ಮಾತನಾಡುವ ಅವರು, ಯುದ್ಧಕ್ಕೆ ಹಾತೊರೆಯುತ್ತಿರುವ ದ್ವಿಮುಖ ನೀತಿ ಸರಿಯಲ್ಲ ಎಂದರು.

ಈ ಅನಿರೀಕ್ಷಿತವಾಗಿ ಆರಂಭವಾಗಿರುವ ಈ ಯುದ್ದದಿಂದಾಗಿ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅನೇಕ ಜನ ಸಕಾಲದಲ್ಲಿ ತಮ್ಮ ನಿರೀಕ್ಷೆಯಂತೆ ಪ್ರಯಾಣ ಮುಂದುವರೆಸಲಾದೇ ಆತಂಕದಲ್ಲಿದ್ದಾರೆ. ದುಬೈನಲ್ಲಿ ಸುಮಾರು 35ಕ್ಕೂ ಹೆಚ್ಚಿನ ಜನ ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಅಲ್ಲಿನ ಏರ್‌ಪೋರ್ಟ್‌ಗಳಲ್ಲಿ ವಿಮಾನಯಾನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಮುಂದಿನ 2-3 ದಿನಗಳಲ್ಲಿ ಯುದ್ಧದ ಕಾರ್ಮೋಡ ಸರಿದು ವಾತಾವರಣ ತಿಳಿಯಾಗಿ ಮೊದಲಿನಂತೆ ವಾತಾವರಣ ನಿರ್ಮಾಣಗೊಳ್ಳುವ ಆಶಯ ತಮಗಿದೆ ಎಂದ ಅವರು, ಹೊರದೇಶಗಳಲ್ಲಿ ಸಮಸ್ಯೆಯಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದೇನೆ. ಅಲ್ಲದೇ ಕೇಂದ್ರದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕಿಸಿ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅವರೆಲ್ಲರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದ ಅವರು ರಾಜ್ಯದ ವಿಧಾನ ಪರಿಷತ್‌ಸದಸ್ಯ ಎಸ್.ಎಲ್.ಭೋಜೆಗೌಡ ಕುಟುಂಬದವರು ದುಬೈ ದೇಶದಲ್ಲಿ ಸುರಕ್ಷಿತವಾಗಿದ್ದು, ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿ ಸುರಕ್ಷಿತವಾಗಿರುವ ವಿಷಯ ತಿಳಿದುಕೊಂಡಿದ್ದೇನೆ. ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಮೃತ ಸಂಕೇತ್‌ನ ಕುಟುಂಬದವರಿಗೆ ಸರ್ಕಾರದಿಂದ ಅಗತ್ಯ ನೆರವು, ಸಹಕಾರ ನೀಡಲಾಗುವುದು. ಅಲ್ಲದೇ ಅವರ ಮನೆಗೆ ತೆರಳಿ ಸಾಂತ್ವನ ಹೇಳಲಾಗುವುದು ಎಂದರು.

ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರತಿದಿನ ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ತರಗತಿಯ ನಂತರ ವಿದ್ಯಾರ್ಥಿಗಳು ಸಕಾಲದಲ್ಲಿ ಮನೆಗೆ ಸುರಕ್ಷಿತವಾಗಿ ಹಿಂದಿರುಗುವ ಬಗ್ಗೆ ಪೋಷಕರು ಗಮನಹರಿಸಬೇಕು. ಜಿಲ್ಲೆ, ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಮಾದಕ ವಸ್ತುಗಳ ಸರಬರಾಜು, ಸಾಗಾಣಿಕೆ ಮತ್ತು ಬಳಕೆ ಬಗ್ಗೆ ನಿಯಂತ್ರಣ ಕಾರ್ಯಗಳಾಗಬೇಕು. ಇಂತಹ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಪೊಲೀಸ್‌ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ ಆದರೆ, ಅವರನ್ನು ಕಠಿಣ ಶಿಕ್ಷೆಗೆ, ದಂಡನೆಗೆ ಗುರಿಪಡಿಸಬೇಕು ಎಂದ ಅವರು, ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಶಿಕ್ಷಕರೊಬ್ಬರ ಮೇಲೆ ಫೋಕ್ಸೋ ಪ್ರಕರಣವೊಂದು ದಾಖಲಾಗಿದೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಖಾಸಗಿ ವಾಹನಗಳ ಸುರಕ್ಷತಾ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಅವರು ತಿಳಿಸಿದರು.

ನಿನ್ನೆಯಷ್ಟೆ ದ್ವಿತೀಯ ಪಿ.ಯು.ಸಿ. ವಾರ್ಷೀಕ ಪರೀಕ್ಷೆಗಳು ಆರಂಭಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ವ್ಯವಸ್ಥಿತವಾಗಿ ಮುಂದುವರೆದಿದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಶುಭ ಹಾರೈಸಿರುವುದಾಗಿ ಅವರು ತಿಳಿಸಿದರು.

1995ರ ನಂತರ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನದ ವ್ಯಾಪ್ತಿಗೊಳಪಡಿಸುವ ವಿಷಯವನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಲ್ಲದೇ ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಹಣಕಾಸು ಇಲಾಖೆಗೆ ಬಿಡುಗಡೆಗೆ ಕ್ರಮ ವಹಿಸಬೇಕಾಗುವುದು. ಈ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೇಗಹೆಚ್ಚಿಸಲು ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ನೂತನ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳುವ ಆಶಯ ತಮಗಿದೆ ಎಂದರು.

ಕರ್ನಾಟಕ ಪಬ್ಲಿಕ್‌ಶಾಲೆಗಳ ಉದ್ಘಾಟನೆ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಬಜೆಟ್‌ನಂತರದಲ್ಲಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಇದೇ ಅವಧಿಯಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

​ಪೌರಕಾರ್ಮಿಕರಿಗೆ ವಿಮಾನಯಾನದ ಸಂಭ್ರಮ: ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್

ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM1 Min Read

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

02/05/2026 11:42 AM1 Min Read

BREAKING : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ : ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ!

02/05/2026 11:33 AM1 Min Read
Recent News

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

02/05/2026 11:49 AM

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

02/05/2026 11:42 AM

ಭಾರತದಲ್ಲಿ ಹೊಸಬರಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್ 5 ಕಾನೂನು ಸಂಸ್ಥೆಗಳಿವು!

02/05/2026 11:37 AM

BREAKING : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ : ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ!

02/05/2026 11:33 AM
State News
KARNATAKA

ALERT : `ಹೇರ್ ಡೈ’ ಮಾಡಿಸುವ ಮಹಿಳೆಯರೇ ಎಚ್ಚರ : ತಪ್ಪದೇ ಇದನ್ನು ತಿಳಿದುಕೊಳ್ಳಲೇಬೇಕು.!

By kannadanewsnow5702/05/2026 11:49 AM KARNATAKA 1 Min Read

ಬೆಂಗಳೂರು: ಇಂದಿನ ದಿನಗಳಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಅಥವಾ ಬಿಳಿ ಕೂದಲನ್ನು ಮರೆಮಾಚಲು ಹೇರ್ ಕಲರ್ ಮಾಡುವುದು ಸಾಮಾನ್ಯವಾಗಿದೆ. ಆದರೆ, ಕೂದಲಿಗೆ…

ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!

02/05/2026 11:42 AM

BREAKING : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ : ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ!

02/05/2026 11:33 AM

ತಾತನಾದ ಡಿ.ಕೆ. ಶಿವಕುಮಾರ್: ರಾಜಕೀಯ ಬದಿಗಿಟ್ಟು ಶುಭಕೋರಿದ ಸಂಸದ ತೇಜಸ್ವಿ ಸೂರ್ಯ | ಪೋಸ್ಟ್ ವೈರಲ್.!

02/05/2026 11:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.