ಹಾಸನ: ವಿಧವೆಯೊಬ್ಬಳ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಯೋಧನೊಬ್ಬ ಇರಿಸಿದ್ದನು. ಆದ್ರೇ ದಿಢೀರ್ ಸಿನಿಮಾ ಸ್ಟೈಲ್ ನಲ್ಲಿ ಮದುವೆ ಸಮಾರಂಭಕ್ಕೆ ನುಗ್ಗಿದಂತ ಮತ್ತೊಬ್ಬ ಮಹಿಳೆ, ಈತ ನನ್ನನ್ನು ಮದುವೆಯಾಗಿದ್ದಾನೆ. ನನಗೆ ಮೋಸ ಮಾಡಿ, ಇಲ್ಲಿ ಎರಡನೇ ವಿವಾಹ ಆಗುತ್ತಿರೋದಾಗಿ ರದ್ಧಾಂತ ನಡೆಸಿದ್ದಳು. ಈ ಬಳಿಕ ರಾಜೀ ಸಂಧಾನ ಕೂಡ ನಡೆಸಲಾಗಿತ್ತು. ಆದ್ರೇ ಈ ಘಟನೆಯಿಂದ ಮನನೊಂದಂತ ಯೋಧ ಆತ್ಮಹತ್ಯೆಗೆ ಶರಣಾಗಿದ್ದಾರೆ.
Viral Video: ಕೋಳಿ ಬಿಡ್ರೋ..! ಸೋಷಿಯಲ್ ಮೀಡಿಯಾದಲ್ಲಿ ಈ ವಯ್ಯನ ಬೈಗುಳದ ವೀಡಿಯೋ ಸಖತ್ ವೈರಲ್.!
ಹಾಸನ ಜಿಲ್ಲೆಯ ಬೂವನಹಳ್ಳಿ ಬಳಿಯಲ್ಲಿನ ಕಲ್ಯಾಣ ಮಂಟಪದಲ್ಲಿ ಯೋಧ ಕಿರಣ್ ಕುಮಾರ್ ವಿಧವೆಯಾಗಿದ್ದಂತ ಆಶಾ ಎಂಬಾಕೆಯನ್ನು ಮದುವೆಯಾಗೋದಕ್ಕೆ ಎಲ್ಲಾ ತಯಾರಿ ನಡೆಸಲಾಗಿತ್ತು. ಇನ್ನೇನು ಅಂದುಕೊಂಡಂತೆ ಆಗಿದ್ದರೇ ಇದು ಇಬ್ಬರು ದಾಂಪತ್ಯಕ್ಕೂ ಕಾಲಿಡಬೇಕಿತ್ತು. ಆದ್ರೇ ಹೀಗೆ ಆಗಲಿಲ್ಲ. ಕಾರಣ, ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿಯನ್ನು ಮಹಿಳೆಯೊಬ್ಬರು ಕೊಟ್ಟಿದ್ದರು.
ತಾನು ಕಿರಣ್ ಕುಮಾರ್ ಮೊದಲ ಪತ್ನಿಯಾಗಿದ್ದೇನೆ. ಎರಡು ವರ್ಷಗಳ ಹಿಂದೆ ನನ್ನನ್ನು ಮದುವೆಯಾಗೋದಾಗಿ ನಂಬಿಸಿದ್ದ. ಆರು ತಿಂಗಳ ಹಿಂದೆ ಮನೆಯಲ್ಲೇ ದೇವರ ಪೋಟೋ ಮುಂದೆ ತಾಳಿ ಕೂಡ ಕಟ್ಟಿದ್ದನು ಎಂಬುದಾಗಿ ಸಂತ್ರಸ್ತ ಮಹಿಳೆ ಮದುವೆ ಮಂಟಪದಲ್ಲಿ ಗಲಾಟೆ ಮಾಡಿದ್ದರು.
BIG BREAKING NEWS: ರಾಜ್ಯದ ನೂತನ ವಿವಿಗೆ ಕುಲಪತಿ ನೇಮಕಕ್ಕೆ ಶೋಧನ ಸಮಿತಿ ರಚಿಸಿ ಸರ್ಕಾರ ಆದೇಶ
ಈ ಗಲಾಟೆಯಿಂದಾಗಿ ಪ್ರಕರಣ ಹಾಸನ ಬಡಾವಣೆ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರ ಮಧ್ಯಪ್ರವೇಶದೊಂದಿಗೆ ರಾಜೀಸಂಧಾನ ಕೂಡ ನಡೆಸಲಾಗಿತ್ತು. ಕೊನೆಗೆ ಯೋಧ ಕಿರಣ್ ಕುಮಾರ್ ನನ್ನು ಆಶಾ ಜೊತೆಗೆ ಕಳುಹಿಸಿಕೊಡಲಾಗಿತ್ತು.
ಇದೀಗ ಮದುವೆಯಾಗಬೇಕಿದ್ದಂತ ಆಶಾ ಜೊತೆಗೆ ತೆರಳಿದ್ದಂತ ಯೋಧ ಕಿರಣ್ ಕುಮಾರ್ ಮದುವೆ ಗಲಾಟೆಯಿಂದ ಬೇಸತ್ತು ಹಾಸನ ತಾಲೂಕಿನ ಹೊಂಗೆರೆ ಗ್ರಾಮದ ಬಳಿಯಲ್ಲಿ ಆರತಕ್ಷತೆಯ ಡ್ರೆಸ್ ನಲ್ಲಿಯೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಹಾಸನದ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಷಯದಲ್ಲೂ ಸುಳ್ಳಾಡುವ ‘ಜೆಡಿಎಸ್’ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ – ಬಿಜೆಪಿ ಕಿಡಿ