ಕೇರಳ: ವರಾಹ ರೂಪಂ ಹಾಡಿನ ಬಗ್ಗೆ ಕೇರಳ ಸ್ಥಳೀಯ ನ್ಯಾಯಾಲಯವು ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಈ ಮೂಲಕ ಕಾಂತಾರ ಚಿತ್ರ ( Kantara Movie ) ತಂಡಕ್ಕೆ ಬಿಗ್ ರಿಲೀಫ್ ಜೊತೆಗೆ, ವರಾಹಂ ರೂಪಂ ಹಾಡಿನ ಕೇಸ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ
ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ನೀಡಿರುವಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು, ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022
ಅಂದಹಾಗೇ ವರಾಹ ರೂಪಂ ಹಾಡಿನ ಟ್ಯೂನ್ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ ನವರಸಂ ಹಾಡಿನ ಟ್ಯೂನ್ ಎಂಬುದಾಗಿ ತೆಕ್ಕುಂಡ ಬ್ರಿಡ್ಸ್ ಕೇರಳದ ಕೋಯಿಕ್ಕೋಡ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ ಹಾಡಿಗೆ ಕೋಯಿಕ್ಕೋಟ್ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
ಈ ಬಗ್ಗೆ ಕಾಂತಾರ ಚಿತ್ರತಂಡವು ಮೇಲ್ಮನವಿಯನ್ನು ಸಲ್ಲಿಸಿತ್ತು. ಈ ಕುರಿತಂತೆ ವಿಚಾರಣೆ ನಡೆಸಿದಂತ ಅರ್ಜಿಯ ವಿಚಾರಣೆಯನ್ನು ನಡೆಸಿದಂತ ನ್ಯಾಯಾಲಯವು, ಇಂದು ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ಹಾಡಿನ ಬಳಕೆಯ ಮೇಲೆ ವಿಧಿಸಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ
ಅಂದಹಾಗೇ ವರಾಹ ರೂಪಂ ಹಾಡು, ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುತ್ತದೆ. ಈ ಹಾಡಿನ ಮೂಲಕ ಚಿತ್ರ ಮತ್ತಷ್ಟು ಚಿತ್ರಪ್ರೇಮಿಗಳನ್ನು ಸೆಳೆಯುವಂತೆ ಆಗಿತ್ತು. ಇದೀಗ ಈ ಹಾಡನ್ನು ಚಿತ್ರದಲ್ಲಿ ಬಳಕೆಗೆ ಇದ್ದಂತ ತಡೆಯಾಜ್ಞೆಯನ್ನು ಕೋಜಿಕ್ಕೋಡ್ ಹಾಗೂ ಪಾಲಕ್ಕಾಡ್ ಸ್ಥಳೀಯ ನ್ಯಾಯಾಲಯವು ತೆರವುಗೊಳಿಸಿದ್ದರಿಂದ, ಕಾಂತಾರ ಚಿತ್ರತಂಡಕ್ಕೆ ನ್ಯಾಯಾಲಯದ ಸತತ ಹೋರಾಟದಲ್ಲಿ ಗೆಲುವು ಸಿಕ್ಕಂತೆ ಆಗಿದೆ.