ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಲಾಟರಿಯಲ್ಲಿ 25 ಕೋಟಿ ಗೆಲ್ಲುವ ಮೂಲಕ ಕೇರಳದ ಆಟೋ ಚಾಲಕ ಸದ್ಯಕ್ಕೆ ಲಕ್ಕಿಮ್ಯಾನ್ ಆಗಿದ್ದಾನೆ. ಟಿವಿಎಂ ಆಟೋ ರಿಕ್ಷಾ ಚಾಲಕ 32 ವರ್ಷದ ಅನೂಪ್ 25 ಕೋಟಿ ರೂ. ಗೆದ್ದಿದ್ದಾನೆ. ಆದರೆ ಆತನ ಪಾಲಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಹೀಗಂತ ಅನೂಪ್ ಅವರೇ ಅಳಲು ತೋಡಿಕೊಂಡಿದ್ದಾರೆ. ಅಯ್ಯೋ..25 ಕೋಟಿ ಗೆದ್ದರೂ ಆತನಿಗೆ ಏನು ಆಗಿದೆ ಎಂದು ಯೋಚಿಸುತ್ತಿದ್ದೀರಾ…ಮುಂದೆ ಓದಿ.
ಲಾಟರಿ ಹೊಡೆದಾಗ ನನ್ನ ಸಂಭ್ರಮ ಹೇಳತೀರದು, ಆದರೆಈಗಿನ ನನ್ನ ಪರಿಸ್ಥಿತಿ ನೋಡಿದರೆ, ಅದನ್ನು ನಾನು ಗೆಲ್ಲಲೇಬಾರದಿತ್ತು ಎಂದು ಅನಿಸುತ್ತಿದೆ. ಲಾಟರಿ ಗೆದ್ದ ಕಾರಣದಿಂದ ನನಗೆ ಹೊರಗಡೆ ಎಲ್ಲಿಯೂ ಹೋಗಲು ಆಗುತ್ತಿಲ್ಲ, ಪ್ರತಿನಿತ್ಯ ನನ್ನ ಮನೆಗೆ ಹಲವಾರು ಜನ ಹಣದ ಸಹಾಯ ಕೇಳಿಕೊಂಡು ಬರುತ್ತಿದ್ದಾರೆ. ನಾನು ಪ್ರತಿನಿತ್ಯ ಅಲ್ಲಿ ಇಲ್ಲಿ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ನಾನು ನನ್ನ ಸಹೋದರಿಯ ಮನೆ ಅಥವಾ ಇನ್ಯಾರದೋ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಲಾಟರಿ ಗೆದ್ದ ವಿಚಾರವನ್ನು ಟಿವಿಯಲ್ಲಿ ನೋಡಿ ಬಹಳ ಸಂಭ್ರಮವಾಯಿತು, ಆದರೆ ನನಗೆ ಈಗ ಲಾಟರಿ ಗೆಲ್ಲಲೇ ಬಾರದು ಎನಿಸುತ್ತಿದೆ. ನಿಜಕ್ಕೂ ಇನ್ನೂ ಕೂಡ ಲಾಟರಿಯ ಹಣ ನನಗೆ ಸೇರಿಲ್ಲ. ಬಂದ ಹಣವನ್ನು ಮುಂದಿನ ಎರಡು ವರ್ಷದ ಅವಧಿಗೆ ಬ್ಯಾಂಕ್ ಗೆ ಹಾಕುತ್ತೇನೆ. ತೆರಿಗೆ ಬಗ್ಗೆ ಏನೂ ಕೂಡ ಗೊತ್ತಿಲ್ಲ , ನಾನೂ ಎರಡನೇ ಅಥವಾ ಮೂರನೇ ಬಹುಮಾನ ಗೆದ್ದಿದ್ದರೆ ಚೆನ್ನಾಗಿತ್ತು ಎಂದು ಅನೂಪ್ ಹೇಳಿದ್ದಾನೆ.
ಓಣಂ ಬಂಪರ್ 2022 (ಬಿಆರ್ -87) ಅಥವಾ ತಿರುವೋಣಂ ಬಂಪರ್ನ ಫಲಿತಾಂಶಗಳನ್ನು ಕೇರಳ ರಾಜ್ಯ ಲಾಟರಿ ಇಲಾಖೆ ಪ್ರಕಟಿಸಿತ್ತು. ಘೋಷಿಸಲಾದ ಬಹುಮಾನಗಳಲ್ಲಿ ತಿರುವನಂತಪುರಂನಲ್ಲಿ ಮಾರಾಟವಾದ ಟಿಕೆಟ್ ಮೇಲೆ ಮೊದಲ ಬಹುಮಾನ 25 ಕೋಟಿ ರೂ.ಗಳು ಮತ್ತು ಇತರ ಎಲ್ಲಾ ಬಹುಮಾನಗಳು 1,000 ರೂ.ಗಳವರೆಗೆ ಸೇರಿವೆ. ಈ ನಡುವೆ ತಿರುವನಂತಪುರಂನಲ್ಲಿ ನಡೆದ ಓಣಂ ಬಂಪರ್ 2022 (ಬಿಆರ್ -87) ಲಾಟರಿಗಾಗಿ ಸೆಪ್ಟೆಂಬರ್ 18 ರ ಡ್ರಾಯಿಂಗ್ನಲ್ಲಿ ಟಿಕೆಟ್ ಸಂಖ್ಯೆ ಟಿಜೆ 750605 ಅವರನ್ನು 25 ಕೋಟಿ ರೂ.ಗಳ ಮೊದಲ ಬಹುಮಾನದ ವಿಜೇತರೆಂದು ಘೋಷಿಸಲಾಯಿತು. ಟಿವಿಎಂ ಆಟೋ ರಿಕ್ಷಾ ಚಾಲಕ 32 ವರ್ಷದ ಅನೂಪ್ 25 ಕೋಟಿ ರೂ.ಗಳ ಮೊದಲ ಬಹುಮಾನ ಪಡೆದ ವ್ಯಕ್ತಿ ಯಾಗಿದ್ದನು.