ಲಕ್ನೋ(ಉತ್ತರ ಪ್ರದೇಶ): ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಮುಂದಿನ ವಾರ ಲಕ್ನೋ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ಜೈಲಿನ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರ ಸಿದ್ದಿಕ್ ಕಪ್ಪನ್ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಈ ಮಾಹಿರತಿ ಬಂದಿದೆ.
ʻಸಿದ್ಧಿಕ್ ಕಪ್ಪನ್ ಕಳೆದ ಕೆಲವು ತಿಂಗಳುಗಳಿಂದ ಲಕ್ನೋ ಜೈಲಿನಲ್ಲಿದ್ದಾರೆ. ಅವರ ಜಾಮೀನು ಆದೇಶ ಪ್ರತಿ ಸಲ್ಲಿಸಿದ ಬಳಿಕ ಸುಪ್ರೀಂ ಕೋರ್ಟ್ನ ಆದೇಶದಂತೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದುʼ ಎಂದು ಡಿಜಿಪಿ (ಜೈಲು) ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್ಒ) ಸಂತೋಷ್ ಕುಮಾರ್ ವರ್ಮಾ ಹೇಳಿದ್ದಾರೆ.
2020 ರ ಅಕ್ಟೋಬರ್ನಲ್ಲಿ ಕಪ್ಪನ್ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧಿಸಿದಂತೆ ವರದಿ ಮಾಡಲು ಹೋಗುತ್ತಿದ್ದಾಗ ಬಂಧಿಸಲಾಗಿತ್ತು. ಕಪ್ಪನ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ನೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಗಲಭೆ ಸೃಷ್ಠಿಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಮಥುರಾ ಪೊಲೀಸರು ಅವರನ್ನು ಬಂಧಿಸಿದರು.
ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕಿದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಕಪ್ಪನ್ಗೆ ಜಾಮೀನು ನೀಡಿದೆ.
Bigg News: ಇಂಟರ್ನೆಟ್ ಸ್ಥಗಿತಕ್ಕೆ ಪ್ರೋಟೋಕಾಲ್ ಇದೆಯೇ? ಕೇಂದ್ರಕ್ಕೆ ಸುಪ್ರೀಂ ಸೂಚನೆ
BIG NEWS: ಮುಂಬರುವ ಹಬ್ಬಗಳಿಗಾಗಿ ಈಗಿನಿಂದಲೇ ಸಜ್ಜು: 16,000 ಉದ್ಯೋಗಿಗಳ ನೇಮಕಕ್ಕೆ ʻMyntraʼ ಭರ್ಜರಿ ಪ್ಲ್ಯಾನ್!
ಹೈದರಾಬಾದ್ನಲ್ಲಿ ಅಸ್ಸಾಂ ಸಿಎಂ ಭಾಷಣಕ್ಕೆ ಅಡ್ಡಿ… ಅಪರಿಚಿತನ ಮಾತಿಗೆ ಮುಗುಳ್ನಕ್ಕ ʻಹಿಮಂತ ಬಿಸ್ವಾʼ… ವಿಡಿಯೋ