ಎರ್ನಾಕುಲಂ (ಕೇರಳ): ಕೇರಳದ ಪಥನಂತಿಟ್ಟಾದಲ್ಲಿ ಮಾಟಮಂತ್ರದ ವಿಧಿವಿಧಾನಗಳಲ್ಲಿ ಇಬ್ಬರು ಮಹಿಳೆಯರನ್ನು ನರಬಲಿಯಾಗಿ ಹತ್ಯೆಗೈದ ಆರೋಪದ ಮೇಲೆ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎಲ್ಲಾ ಮೂವರು ಆರೋಪಿಗಳನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಅದು ಅಕ್ಟೋಬರ್ 26 ರಂದು ಕೊನೆಗೊಳ್ಳಲಿದೆ. ಆರೋಪಿಗಳನ್ನು ಇಂದು ಎರ್ನಾಕುಲಂ ಜಿಲ್ಲಾ ಸೆಷನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಹಿಳೆ ಸೇರಿದಂತೆ ಮೂವರು ಆಮಿಷವೊಡ್ಡಿ ಇಬ್ಬರು ಮಹಿಳೆಯನ್ನು ನರಬಲಿಯಾಗಿ ಹತ್ಯೆಗೈದಿದ್ದಾರೆ. ಮಹಿಳೆಯರು ನಾಪತ್ತೆಯಾದ 24 ಗಂಟೆಗಳಲ್ಲಿ ಪತ್ತನಂತಿಟ್ಟ ಜಿಲ್ಲೆಯ ಮನೆಯೊಂದರಲ್ಲಿ ಸಮಾಧಿಯಾಗಿರುವ ಸ್ಥಿತಿಯಲ್ಲಿ ಎರಡು ಛಿದ್ರಗೊಂಡ ಶವಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ಖಚಿತಪಡಿಸಿದ್ದಾರೆ.