ಬೆಂಗಳೂರು: ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಬಿಎಲ್ಆರ್ ವಿಮಾನ ನಿಲ್ದಾಣ)ದ ಟರ್ಮಿನಲ್ 2ರ ಉದ್ಘಾಟನೆಯನ್ನು ನೆರವೇರಿಸಿದರು. ಈ ಅತ್ಯಂತ ನಿರೀಕ್ಷೆಯ ಟಿ2ರ ಉದ್ಘಾಟನೆಯನ್ನು ಬೆಂಗಳೂರು ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(ಬಿಐಎಎಲ್) ಆಯೋಜಿಸಿತ್ತು.
ಫೇರ್ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಸಿಇಒ ಪ್ರೇಮ್ ವತ್ಸ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಪ್ರಾರಂಭವು ನಮಗೆ ಐತಿಹಾಸಿಕ ಕ್ಷಣವಾಗಿದೆ. ಹಿಂದಿನ ಎರಡು ವರ್ಷಗಳು ವಿಶ್ವದಾದ್ಯಂತ ಸಾಂಕ್ರಾಮಿಕವು ಉದ್ಯಮಗಳಿಗೆ ಅಪಾರ ಹಾನಿಯುಂಟು ಮಾಡಿದ ಸಾಂಕ್ರಾಮಿಕದಿಂದಾಗಿ ಅತ್ಯಂತ ಸವಾಲಿನದಾಗಿದ್ದವು, ಆದರೆ ಟಿ2 ಪೂರ್ಣಗೊಳಿಸುವಲ್ಲಿ ನಮ್ಮ ಕೆಲಸ ಮುಂದುವರಿದಿತ್ತು. ಬೆಂಗಳೂರು ತನ್ನ ಸಾಧನೆಗಳಿಗೆ ಸದಾ ಸುದ್ದಿಯಲ್ಲಿರುವ ವಿಕಾಸಗೊಳ್ಳುತ್ತಿರುವ ಮತ್ತು ಉದಯೋನ್ಮುಖ ನಗರವಾಗಿದೆ ಮತ್ತು ವಿಶ್ವ ಮಟ್ಟದ ಟರ್ಮಿನಲ್ ನಿರ್ಮಿಸುವುದು ನಮ್ಮ ಬಯಕೆಯಾಗಿತ್ತು. ವೈಮಾನಿಕ ವಲಯವು ಸಾಂಕ್ರಾಮಿಕದಿಂದ ನಿಧಾನಗತಿಯಿಂದ ಸುಧಾರಿಸಿಕೊಳ್ಳುತ್ತಿದೆ ಮತ್ತು ನಾವು ಟಿ2 ಅನ್ನು ಸಕಾಲಕ್ಕೆ ಉದ್ಘಾಟಿಸಿದ್ದೇವೆ. ನಿಜಕ್ಕೂ ಅಸಾಧಾರಣವಾದುದನ್ನು ನಿರ್ಮಿಸುವ ನಮ್ಮ ಪ್ರಯಾಣದಲ್ಲಿರುವಾಗ ನಮಗೆ ಸತತವಾಗಿ ಸರ್ಕಾರವು ಅದರಲ್ಲಿಯೂ ಉದ್ಯಮಗಳನ್ನು ಸ್ವಾಗತಿಸುವ ಸರ್ಕಾರವು ಬೆಂಬಲಿಸಿತು. ಮತ್ತು ಒಂದು ಉದ್ಯಮವನ್ನು ಸ್ವಾಗತಿಸಿದಾಗ ಹೆಚ್ಚು ಉದ್ಯಮಗಳು ಪ್ರವೇಶಿಸುತ್ತವೆ ಮತ್ತು ಟಿ2 ಪ್ರಾರಂಭದೊಂದಿಗೆ ನಾವು ಹೆಚ್ಚು ಉದ್ಯಮಗಳು ಮತ್ತು ಪಾಲುದಾರರೊಂದಿಗೆ ಸಹಯೋಗ ಹೊಂದುತ್ತಿದ್ದೇವೆ ಎಂಬ ಭರವಸೆ ಹೊಂದಿದ್ದೇವೆ ಮತ್ತು ನಾವು ನಮ್ಮ ಗುರಿಯ ಮೇಲೆ ನಂಬಿಕೆ ಇರಿಸಿದ ಮತ್ತು ಸತತವಾಗಿ ಬೆಂಬಲಿಸಿದ ಸರ್ಕಾರಕ್ಕೆ ಆಭಾರಿಯಾಗಿದ್ದೇವೆ” ಎಂದರು.
ಪ್ರಧಾನಿ ಮೋದಿ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ – DKS
ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(ಬಿಐಎಎಲ್)ನ ಎಂ.ಡಿ. ಮತ್ತು ಸಿ.ಇ.ಒ. ಹರಿ ಮರಾರ್, “ಟಿ2ರ ಪ್ರಾರಂಭದೊಂದಿಗೆ ನಾವು ಪ್ರತಿವರ್ಷ 25 ಮಿಲಿಯನ್ ಹೆಚ್ಚುವರಿ ಪ್ರಯಾಣಿಕರಿಗೆ ಸೇವೆ ಒದಗಿಸಲು ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದೇವೆ. ಟಿ2 ಅನ್ನು ವಿಶೇಷವಾಗಿಸಿರುವುದು ಅದರ ಪ್ರಮಾಣ ಮತ್ತು ಗಾತ್ರ ಮಾತ್ರವಲ್ಲದೆ ಇದು ಬೆಂಗಳೂರು ನಗರದಿಂದ ಸ್ಫೂರ್ತಿ ಪಡೆದಿದೆ. ಉದ್ಯಾನದಲ್ಲಿ ನಿರ್ಮಾಣವಾದ ಟರ್ಮಿನಲ್ನಂತೆ ನಿರ್ಮಾಣವಾದ ಟಿ2 ಬೆಂಗಳೂರಿನ ವಿಶೇಷತೆಗಳಾದ ಹಸಿರು ಆಧುನಿಕತೆ, ಆವಿಷ್ಕಾರ, ಸುಸ್ಥಿರತೆ ಮತ್ತು ಸಾಂಸ್ಕೃತಿಕ ಶ್ರೀಮಂತ ನಗರವನ್ನು ಪ್ರತಿಫಲಿಸುತ್ತದೆ. ಕಳೆದ 14 ವರ್ಷಗಳಿಂದ ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಹೆಬ್ಬಾಗಿಲಾಗಿ ವಿಕಾಸಗೊಂಡಿದೆ ಮತ್ತು ಈ ವಿಸ್ತರಣೆಯ ಮುಂದಿನ ಹಂತದಲ್ಲಿ ಇದು ಭಾರತದ ಹೊಸ ಹೆಬ್ಬಾಗಿಲಾಗಿ ವಿಮಾನ ನಿಲ್ದಾಣವನ್ನು ರೂಪಿಸುವ ಗುರಿ ಹೊಂದಿದೆ” ಎಂದರು.
ಟಿ2 ಹೊಸ 255,661 ಚದರ ಮೀಟರ್ ಟರ್ಮಿನಲ್ ಬೆಂಗಳೂರು ಸುಂದರ ನಗರಿಗೆ ಸಮರ್ಪಣೆಯಾಗಿದೆ. ಹೊಸ ಟರ್ಮಿನಲ್ ಟರ್ಮಿನಲ್ 1ರ ಈಶಾನ್ಯ ಬದಿಯಲ್ಲಿದೆ ಮತ್ತು ಅದನ್ನು ನ್ಯೂಯಾರ್ಕ್ ಮೂಲದ ವಾಸ್ತುಶಿಲ್ಪ ಕಂಪನಿ ಎಸ್ಒಎಂ ವಿನ್ಯಾಸಗೊಳಿಸಿದೆ.
ವಾಸ್ತುಶಿಲ್ಪೀಯ ಮುಖಗಳು
ಟಿ2ರ ಪ್ರಮಾಣ ಮತ್ತು ಒಳನೋಟಯುಕ್ತ ವಿನ್ಯಾಸವು ಪ್ರಯಾಣಿಕರಿಗೆ ಹಿಂದೆಂದೂ ಕಾಣದ ಅತ್ಯಂತ ಆತ್ಮೀಯ ಭಾವ ನೀಡುತ್ತದೆ. 90 ಕೌಂಟರ್ಗಳನ್ನು ಹೊಂದಿರುವ ಟಿ2 ವೇಗದ ಚೆಕ್-ಇನ್ಗಳು ಮತ್ತು ಸೆಕ್ಯುರಿಟಿ ಚೆಕ್ ಪ್ರದೇಶಗಳಿಂದ ಸುಲಭವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಎರಡು ಹಂತದ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ರೀಟೇಲ್ ಮತ್ತು ಲೌಂಜ್ ಪ್ರದೇಶಗಳನ್ನು ಕಟ್ಟಡದ ಒಳಗಡೆ ಮತ್ತು ಹೊರಗಡೆ ಆಕರ್ಷಕ ಹಸಿರಿನ ನೋಟ ದೊರೆಯುವಂತೆ ಮಾಡಲಾಗಿದೆ. ಎಲ್-ಆಕಾರದ ಪಿಯರ್ಗಳು 19 ಬೋರ್ಡಿಂಗ್ ಗೇಟ್ಗಳಿಗೆ ಅವಕಾಶ ನೀಡುತ್ತವೆ(ಕೋಡ್ ಸಿ ಸಮಾನ ವಿಮಾನ). ಅವುಗಳನ್ನು ತಳ್ಳಿ ಮುಖ್ಯ ಸಂಕೀರ್ಣಕ್ಕೆ ಬರಲು ಸಾಕಷ್ಟು ಚಲಿಸುವ ಸ್ಥಳಾವಕಾಶ ನೀಡಲಾಗಿದೆ. ಟರ್ಮಿನಲ್ನ ಒಳಾಂಗಣಗಳು ಬಿದಿರಿನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ಬಿದಿರಿನ ನೇಯ್ಗೆ ಹೊಂದಿವೆ ಮತ್ತು ಇದು ಟರ್ಮಿನಲ್ಗೆ ಸಮಕಾಲೀನ ಆದರೆ ಕ್ಲಾಸಿಕ್ ನೋಟ ಮತ್ತು ಭಾವನೆ ಮೂಡಿಸುತ್ತದೆ.
ನಾಲ್ಕು ಆಧಾರ ಸ್ತಂಭಗಳು
ತಂತ್ರಜ್ಞಾನ ಮತ್ತು ಆವಿಷ್ಕಾರದ ತತ್ವವು ಟರ್ಮಿನಲ್ನ ಅವಿಭಾಜ್ಯ ಅಂಗವಾಗಿದ್ದು ಡಿಜಿ ಯಾತ್ರಾದ ತಡೆರಹಿತ ಪ್ರಯಾಣಿಕರ ಪ್ರಯಾಣದ ಮೂಲಕ ನಿರೂಪಿಸಲ್ಪಡುತ್ತದೆ. ಹಲವಾರು ಏಕೀಕರಣಗೊಂದ ತಂತ್ರಜ್ಞಾನದ ವಿಶೇಷತೆಗಳು ಟರ್ಮಿನಲ್ ಅನ್ನು ಗ್ರಾಹಕ ಕೇಂದ್ರಿತವಾಗಿಸಿ, ದಕ್ಷತೆಯ ಹಾಗೂ ಆವಿಷ್ಕಾರಕ ಕಾರ್ಯ ನಿರ್ವಹಣೆ ಸಾಧ್ಯವಾಗಿಸುತ್ತವೆ.
ಈ ಟರ್ಮಿನಲ್ನಲ್ಲಿ ನಾವು ಎಲ್ಲ ಮಾನವ ಭಾವನೆಗಳನ್ನೂ ಕಾಣುತ್ತೇವೆ. ಇದನ್ನು ಅಭಿವ್ಯಕ್ತಿಸಲು `ನವರಸ’ ವಸ್ತುವು ಎಲ್ಲ ಟರ್ಮಿನಲ್ 2ರಲ್ಲಿರುವ ಎಲ್ಲ ಕಲಾಕೃತಿಗಳನ್ನು ಒಗ್ಗೂಡಿಸುತ್ತದೆ. ಪ್ರಮುಖ ತಾಣಗಳಲ್ಲಿ ಪ್ರದರ್ಶಿಸಲಾದ ಕಲಾಕೃತಿಗಳು ಪ್ರಯಾಣಿಕರ ಪ್ರಯಾಣದ ದಾರಿದೀಪಗಳಾಗಿ ಕೆಲಸ ಮಾಡುವ ಮೂಲಕ ಪ್ರಯಾಣಿಕರಿಗೆ ತಡೆದು, ಪ್ರತಿಫಲಿಸಿ ಮತ್ತು ಆನಂದಿಸಲು ಅವಕಾಶ ನೀಡುತ್ತವೆ. ಈ ಕಲಾಕೃತಿಗಳು ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯನ್ನು ಹಾಗೂ ಭಾರತದ ತತ್ವಗಳನ್ನು ಪ್ರತಿನಿಧಿಸುತ್ತವೆ. 300 ಮುಕ್ತ ಪ್ರವೇಶಗಳ ಮೂಲಕ 43 ಕಲಾವಿದರ 60 ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಈ ಎಲ್ಲ ಮುಖಗಳೂ ಟಿ2ಕ್ಕೆ ಟರ್ಮಿನಲ್ ಆಗಿ ವಿಶೇಷ ಸ್ಥಾನಮಾನ ನೀಡಿದ್ದು ಅದು ಆಧುನಿಕ ಆದರೆ ಸಂಸ್ಕೃತಿಯಲ್ಲಿ ಬೇರೂರಿದ ಮತ್ತು ಎಲ್ಲ ಪ್ರಯಾಣಿಕರಿಗೂ ಸ್ಮರಣೀಯ `ತಾಣ’ದ ಅನುಭವವನ್ನು ನೀಡುತ್ತವೆ.
ಉದ್ಯಾನದಲ್ಲಿ ಟರ್ಮಿನಲ್
ಟಿ2 ವಿನೂತನ ಬಗೆಯ `ಉದ್ಯಾನದಲ್ಲಿರುವ ಟರ್ಮಿನಲ್’ ಆಗಿದೆ ಮತ್ತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ಹಸಿರು ಸೌಂದರ್ಯಪ್ರಜ್ಞೆಯ ಸೂಕ್ತವಾದ ವಿಸ್ತರಣೆಯ ಸ್ಥಾನಮಾನ ನೀಡಿದೆ. ಈ ಟರ್ಮಿನಲ್ ಮತ್ತು ಪ್ರದೇಶವು ಅದರತ್ತ ಮುನ್ನಡೆಸುತ್ತಿದ್ದು ಅವುಗಳನ್ನು ಪ್ರಯಾಣಿಕರಿಗೆ ಉದ್ಯಾನವನದಲ್ಲಿ ನಡೆದಾಡಿದ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಮೈನ್ ಅಕ್ಸೆಸ್ ರೋಡ್(ಎಂಎಆರ್)ನಿಂದ ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್ಗೆ ಪ್ರವೇಶದಿಂದ ಟಿ೨ಕ್ಕೆ ಪ್ರವೇಶಿಸುವವರೆಗೆ ಮತ್ತು ನಂತರ ಪಿರ್ಸ್ನಲ್ಲಿ ವಿಮಾನ ಹತ್ತುವವರೆಗೆ ಪ್ರಯಾಣಿಕರಿಗೆ ಹಸಿರಿನ ಮನಮೋಹಕ ದೃಶ್ಯ ಕಾಣುತ್ತದೆ.
ಟರ್ಮಿನಲ್ ಸುತ್ತಲೂ 10,235 ಚದರ ಅಡಿಗಳಷ್ಟು ಹಸಿರು ಗೋಡೆಗಳಿಂದ, ಕಂಚಿನ ಪರದೆಗಳ ಮೂಲಕ ಟರ್ಮಿನಲ್ನ ತಾರಸಿಯಿಂದ ಇಳಿದುಬಿದ್ದ ತೂಗಾಡುವ ಉದ್ಯಾನವನಗಳು ಮತ್ತು ತಾರಸಿಯಿಂದ ಇಳಿಬಿದ್ದ ಗಂಟೆಗಳು ಮತ್ತು ಆವರಣದ ಒಳಗಡೆ ಇರುವ ಹಸಿರು ಕೊಳಗಳು ಟರ್ಮಿನಲ್ ಮತ್ತು ಬೋರ್ಡಿಂಗ್ ಪಿಯರ್ಗಳ ನಡುವಿನ ವಿಸ್ತಾರ ಅರಣ್ಯ ಪ್ರದೇಶದಿಂದ ಪ್ರಯಾಣಿಕರು ಹಿಂದೆಂದೂ ಕಾಣದ ಹಸಿರಿನ ಅನುಭವ ಪಡೆಯುತ್ತಾರೆ.
630 ಸ್ಥಳೀಯ ಸಸ್ಯಗಳು, 3,600+ ಸಸ್ಯ ಪ್ರಭೇದಗಳು, 150 ತಾಳೆ ಪ್ರಭೇದಗಳು, 7,700 ಕಸಿ ಆದ ಮರಗಳು, 100 ವಿಧಗಳ ಲಿಲ್ಲಿಗಳು, 96 ಕಮಲದ ಪ್ರಭೇದಗಳು ಮತ್ತು 180 ಅಪರೂಪದ ಅಪಾಯದಲ್ಲಿರುವ ಪ್ರಭೇದಗಳು ಮತ್ತು 10 ಪಾರಿಸರಿಕ ಆವಾಸಸ್ಥಾನಗಳು ಬೆಂಗಳೂರು ವಿಮಾನ ನಿಲ್ದಾಣದ ಟಿ2ರ ಹಸಿರು ಪ್ರದೇಶವನ್ನು ದಟ್ಟ ಹಸಿರನ್ನಾಗಿಸುತ್ತದೆ. ಟರ್ಮಿನಲ್ ಸುತ್ತಲೂ ಇರುವ ಈ ಉದ್ಯಾನವನವು ತನ್ನ ಸುತ್ತಮುತ್ತಲಿನ ಪ್ರದೇಶಕ್ಕಿಂತ ಎರಡರಿಂದ ಮೂರು ಡಿಗ್ರಿ ಕಡಿಮೆ ಮೈಕ್ರೊಕ್ಲೋ ಕಾಪಾಡುತ್ತದೆ. ಇಲ್ಲಿನ ಸಸ್ಯ ಹಾಗೂ ಪ್ರಾಣಿಗಳು ಮತ್ತು ಆಕಾಶದ ಬೆಳಕೂ ಕೂಡಾ ಬಿದಿರಿನ ಸೂಕ್ಷ್ಮ ಮಾದರಿಯ ಮೂಲಕ ಶೋಧನೆಗೊಳ್ಳುತ್ತದೆ ಮತ್ತು ಒಳಾಂಗಣ ಜಲಪಾತಗಳು ಕರ್ನಾಟಕದ ಜಲಪಾತಗಳಿಂದ ಸ್ಫೂರ್ತಿ ಪಡೆಯಲಾಗಿದ್ದು ಪ್ರತಿಯೊಂದೂ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರಿಗೆ ಅತ್ಯಂತ ಆಹ್ಲಾದಕರ ಅನುಭವ ನೀಡುತ್ತವೆ.
ಸುಸ್ಥಿರತೆ
ಒಳಾಂಗಣಗಳನ್ನು ಬಿದಿರಿನಿಂದ ತಯಾರಿಸಲಾಗಿದೆ ಮತ್ತು ದಟ್ಟ ಹಸಿರಿನ ಉದ್ಯಾನಗಳು ಟರ್ಮಿನಲ್ನ ಸೌಂದರ್ಯಕ್ಕೆ ಕೊಡುಗೆ ನೀಡುತ್ತವೆ, ಇವು ಟಿ2ರ ಸುಸ್ಥಿರತೆಯ ಆಧಾರಸ್ತಂಭಕ್ಕೆ ಕೊಡುಗೆ ನೀಡುವ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಳಸಲಾದ ಎಂಜಿನಿಯರ್ಡ್ ಬಿದಿರು ಅಗ್ನಿ ನಿರೋಧಕ ಮತ್ತು ದೀರ್ಘಬಾಳಿಕೆ ಬರುವಂಥದ್ದಾಗಿವೆ, ಉದ್ಯಾನವನಗಳು ಮತ್ತು ಅರಣ್ಯವು ನೈಸರ್ಗಿಕವಾಗಿ ಗಾಳಿಯನ್ನು ಸ್ವಚ್ಛಗೊಳಿಸುತ್ತವೆ. ಸೌರ ಫಲಕಗಳು ಮತ್ತು ಸೂರ್ಯನ ಬೆಳಕು ಒಟ್ಟಾರೆ ಶೇ.24.9ರಷ್ಟು ವಿದ್ಯುಚ್ಛಕ್ತಿ ಉಳಿತಾಯ ನೀಡುತ್ತವೆ. ಮಳೆನೀರು ಕೊಯಿಲು, ಆರು ಮಳೆನೀರಿನಿಂದ ಸಂಗ್ರಹವಾಗುವ ಕೊಳಗಳು 413 ಮಿಲಿಯನ್ ಲೀಟರ್ಗಳಷ್ಟು ನೀರು ವಿಮಾನ ನಿಲ್ದಾಣದ ಅಗತ್ಯಗಳಿಗೆ ಪೂರೈಸುತ್ತದೆ ಮತ್ತು ಬಹು ಉದ್ದೇಶದ ಕೊಳಗಳಲ್ಲಿ ಮಾಲಿನ್ಯಕಾರಕಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲಾಗುತ್ತದೆ- ಈ ಎಲ್ಲವೂ ದೀರ್ಘಾವಧಿ ಸುಸ್ಥಿರತೆಯ ಯೋಜನೆಯ ಅವಿಭಾಜ್ಯ ಅಂಗವಾಗಿವೆ. ಉನ್ನತೀಕರಿಸಿದ ಒಳಾಂಗಣ ಗಾಳಿಯ ಗುಣಮಟ್ಟದ ಕಾರ್ಯತಂತ್ರಗಳಾದ ಎಂಟ್ರಿವೇ ಸಿಸ್ಟಮ್ಸ್ ಮತ್ತು ಇಂಟೀರಿಯರ್ ಕ್ರಾಸ್-ಕಂಟಾಮಿನೇಷನ್ ಪ್ರಿವೆನ್ಷನ್, ಟ್ರೀಟೆಡ್ ರಿವರ್ಸ್ ಓಸ್ಮೋಸಿಸ್(ಆರ್ಒ)ನೀರನ್ನು ಬಿಸಿ ಮಾಡಲು, ವೆಂಟಿಲೇಷನ್ ಮತ್ತು ಏರ್ ಕಂಡೀಷನಿಂಗ್ ಸಿಸ್ಟಂಗಳಿಗೆ ಬಳಸುತ್ತಿರುವುದು ಬೆಂಗಳೂರು ವಿಮಾನ ನಿಲ್ದಾಣದ ಸುಸ್ಥಿರತೆಯ ರೂಢಿಗಳನ್ನು ಮತ್ತಷ್ಟು ಸದೃಢಗೊಳಿಸುತ್ತವೆ. ಈ ಸುಸ್ಥಿರ ರೂಢಿಗಳನ್ನು ಪ್ರಾರಂಭಕ್ಕೆ ಮುನ್ನವೇ ಗುರುತಿಸಲಾಗಿದೆ ಮತ್ತು ಕಾರ್ಯಾಚರಣೆ ಪ್ರಾರಂಭಿಸುವ ಮುನ್ನವೇ ಟಿ2 ಯುಎಸ್ಜಿಬಿಸಿ(ಯುಎಸ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್)ನಿಂದ ಪ್ಲಾಟಿನಂ ಲೀಡ್ ರೇಟಿಂಗ್ ಪಡೆದಿದೆ. ಮುಂದಿನ ಏಕೀಕೃತ ಘನ ತ್ಯಾಜ್ಯ ನಿರ್ವಹಣೆ ಘಟಕವು ಜೈವಿಕವಾಗಿ ಕಳಿಯಬಲ್ಲ ತ್ಯಾಜ್ಯವನ್ನು ಇಂಧನ ಮತ್ತು ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಶೂನ್ಯ ತ್ಯಾಜ್ಯವನ್ನಾಗಿಸಲಿದೆ.
ಆವಿಷ್ಕಾರ ಮತ್ತು ತಂತ್ರಜ್ಞಾನ
ಟಿ2ರ ಹಿಂದಿನ ಪ್ರಮುಖ ಚಾಲಕಶಕ್ತಿಗಳಲ್ಲಿ ಒಂದು ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ತಾರ್ಕಿಕವಾಗಿ ಬಳಸುವ ಮೂಲಕ ಪ್ರಯಾಣಿಕರ ಅನುಭವವನ್ನು ಸರಳೀಕೃತ, ತಡೆರಹಿತ ಮತ್ತು ಪ್ರಯತ್ನರಹಿತವಾಗಿಸುವುದು. ವಿಮಾನ ನಿಲ್ದಾಣದ ಪ್ರವೇಶದಿಂದ ವಿಮಾನ ಹತ್ತುವವರೆಗೆ ಪ್ರಯಾಣಿಕರು ಸುಲಭವಾದ ಚೆಕ್-ಇನ್ ಪ್ರಕ್ರಿಯೆ, ವೇಗದ ಸೆಕ್ಯುರಿಟಿ ಚೆಕ್ ಮತ್ತು ಅನುಕೂಲಕರ ಬೋರ್ಡಿಂಗ್ನ ಅನುಭವ ಪಡೆಯಬಹುದು. ಸೆಲ್ಫ್-ಬ್ಯಾಗೇಜ್ ಡ್ರಾಪ್ ಮತ್ತು ಡಿಜಿ ಯಾತ್ರಾ ಅಲ್ಲದೆ ಹಲವಾರು ತಾಂತ್ರಿಕ ಆವಿಷ್ಕಾರಗಳನ್ನು ಪ್ರಯಾಣಿಕರ ಸುಲಭ ಪ್ರಯಾಣಕ್ಕೆ ಅನುಷ್ಠಾನಗೊಳಿಸಲಾಗಿದೆ.
ಡಿಜಿ ಯಾತ್ರಾ ಪ್ರಯಾಣಿಕರ ಪ್ರಯಾಣವನ್ನು ಉನ್ನತೀಕರಿಸಿದ ಅತ್ಯಂತ ಸ್ಮಾರ್ಟ್ ಆದ ಮತ್ತು ಸುಲಭ ಪ್ರಕ್ರಿಯೆಗಳಲ್ಲಿ ಒಂದಾಗಿದೆ. `ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್’ ತಂತ್ರಜ್ಞಾನದಿಂದ ಪ್ರಯಾಣಿಕರು ಯಾವುದೇ ಅಡೆತಡೆಗಳಿಲ್ಲದೆ ಸೆಕ್ಯುರಿಟಿ ಚೆಕ್ಗಳನ್ನು ದಾಟಿ ಹೋಗಬಹುದು. ಪ್ರಯಾಣಿಕರ ಮುಖವು ಇಂದು ಒಂದೇ ಬಯೋಮೆಟ್ರಿಕ್ ಟೋಕನ್ ಆಗಿದೆ ಮತ್ತು ಬೆಂಗಳೂರು ವಿಮಾನ ನಿಲ್ದಾಣವು ಈ ಸ್ಮಾರ್ಟ್ ಸೆಕ್ಯುರಿಟಿ ಅನುಷ್ಠಾನ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದ್ದು 2017ರಿಂದಲೂ ಹೆಚ್ಚು ನಿಖರ ಪರೀಕ್ಷೆ ಮತ್ತು ಹೆಚ್ಚು ಥ್ರೋಪುಟ್ ನೀಡುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣವು ಆಗಸ್ಟ್ 15, 2022ರಂದು ಯಶಸ್ವಿಯಾಗಿ ಫೇಸ್ 1 ಪ್ರಾರಂಭಿಸಲು ಭಾರತ ಸರ್ಕಾರಕ್ಕೆ ಬೆಂಬಲಿಸಿದೆ. ಅಂತಹ ಆವಿಷ್ಕಾರಕ ರೂಢಿಗಳು ಮತ್ತು ಸುಧಾರಿತ ತಂತ್ರಜ್ಞಾನದ ಕ್ರಮಗಳಿಂದ ಟಿ2 ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ಪ್ರಯಾಣಗಳನ್ನು ಸುಲಭ ಮತ್ತು ಸ್ಮರಣೀವಾಗಿಸುವ ಭರವಸೆಯನ್ನು ಕಾಪಾಡುವ ಗುರಿ ಹೊಂದಿದೆ.
ಕಲೆ ಮತ್ತು ಸಂಸ್ಕೃತಿ
ಟಿ2 ಎಲ್ಲ ಪ್ರಯಾಣಿಕರಿಗೂ ತನ್ನ ಕಲಾ ಕಾರ್ಯಕ್ರಮದ ಭಾಗವಾಗಿ ಒಳನೋಟಯುಕ್ತ ಕಲೆ ಮತ್ತು ಅಲಂಕರಣದ ಅಂಶಗಳಿಂದ ಕಣ್ಣಿಗೆ ಹಬ್ಬ ನೀಡುತ್ತದೆ. ಬೆಂಗಳೂರು ವಿಮಾನ ನಿಲ್ದಾಣದ ಕಲಾ ತಂಡವು ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಹಾಗೂ ಭರತನ ನಾಟ್ಯಶಾಸ್ತçದ ನವರಸ ಈ ಎರಡು ವಸ್ತುಗಳನ್ನು ಆಧರಿಸಿ ರೂಪಿಸಿದೆ. ಆರು ಕಲಾಕೃತಿಗಳು ಈ ಎರಡು ವಸ್ತುಗಳನ್ನು ಸೆರೆ ಹಿಡಿಯುತ್ತವೆ. ಬೋರ್ಡಿಂಗ್ ಪಿಯರ್ ಮೇಲೆ ತೂಗುಬಿಟ್ಟಿರುವ ಕೃಷ್ಣರಾಜ್ ಚೊನಾಟ್ ಅವರ ತಾಮ್ರದ ವಾಸ್ತುಶಿಲ್ಪದಿಂದ, ಗಾಥ ಮತ್ತು ಎಂ.ಎ.ರೌಫ್ ಅವರ ಬಿದರಿ ಗೋಡೆ ಕಲೆ ಹಾಗೂ ದಾಟು ಮರದ ಬೊಂಬೆಗಳು ಹಾಹೂ ಬೋರ್ಡಿಂಗ್ ಗೇಟ್ಗಳ ಮೇಲೆ ತಾರಸಿಯಿಂದ ತೂಗುಬಿದ್ದ ಅನುಪಮಾ ಹೊಸ್ಕೆರೆ ಅವರ ಕಲಾಕೃತಿಗಳಿಂದ ಫೋಲೀ ಡಿಸೈನ್ನಿಂದ ಚರ್ಮದ ಬೊಂಬೆಗಳು ಮತ್ತು ಗುಂಡುರಾಜು ಕಲಾಕೃತಿಗಳು ಟಿ2ರ ವಿಸ್ಮಯಕಾರಿ ಸ್ಫೂರ್ತಿಯ ಭರವಸೆ ಈಡೇರಿಸುತ್ತವೆ ಮತ್ತು ಟರ್ಮಿನಲ್ ಮೂಲಕ ಪ್ರಯಾಣಿಕರ ಪ್ರಯಾಣ ಸ್ಮರಣೀಯ ಅನುಭವವಾಗಿಸುತ್ತವೆ. ಆದಾಗ್ಯೂ ಈ ಕಲಾ ಕಾರ್ಯಕ್ರಮದ ಆದ್ಯತೆಯು ಕರ್ನಾಟಕದ ಹಾಗೂ ಇತರೆ ದಕ್ಷಿಣ ಭಾರತದ ಕಲಾ ಮಾದರಿಗಳ ಸಾಂಸ್ಕೃತಿ ವೈವಿಧ್ಯತೆ ಮತ್ತು ವಿಶಿಷ್ಟ ಕಲಾ ಮಾದರಿಗಳನ್ನು ಪ್ರದರ್ಶಿಸುವುದಾಗಿದೆ.
ಕರ್ನಾಟಕ ಹಾಗೂ ಭಾರತದಾದ್ಯಂತ ಪ್ರಯಾಣಿಕರನ್ನು ತಡೆದು, ಗಮನಿಸಿ, ಆತ್ಮಶೋಧನೆ ಮಾಡಿಕೊಂಡು ಮತ್ತು ಪುನಶ್ಚೇತನ ಹೊಂದುವ ಸಾಮರ್ಥ್ಯವಿರುವ ೪೩ ಕಲಾವಿದರಿಗೆ ಈ 60 ಕಲಾಕೃತಿಗಳನ್ನು ರಚಿಸಲು ಅವಕಾಶ ನೀಡಲಾಯಿತು.
ಟಿ2 ಅನ್ನು ಅತ್ಯುನ್ನತ ಮಟ್ಟದ ಪ್ರಯಾಣಿಕರ ಅನುಭವ ನೀಡಲು ಅಲ್ಲದೆ ಪ್ರಯಾಣಿಕರಿಗೆ ಸ್ಮರಣೀಯ ಪ್ರಭಾವ ಮೂಡಿಸಲು, ಸುಸ್ಥಿರ ರೂಢಿಗಳು ಮತ್ತು ತಂತ್ರಜ್ಞಾನ ನೀಡಲು ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಹಾಗೂ ಕರ್ನಾಟಕ ರಾಜ್ಯದ ವಸತಿ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಶ್ರೀ ವಿ.ಸೋಮಣ್ಣ ಉಪಸ್ಥಿತರಿದ್ದರು.