ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳು ಸಲ್ಲಿಸಿರುವಂತ ದಾಖಲಾತಿಗಳ ವ್ಯತ್ಯಾಸದ ತಿದ್ದುಪಡಿಗಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು( KEA) ನಾಳೆ, ನಾಡಿದ್ದು ಅವಕಾಶ ನೀಡಲಾಗಿದೆ.
VIRAL NEWS: ಬೆಕ್ಕನ್ನು ಹುಲಿ ಮಾಡಿದ ಭೂಪ: ಮುಂದೆ ಪೋಲಿಸರಿಗೆ ಸಿಕ್ಕಿದ್ದೇ ರೋಚಕ
ಈ ಸಂಬಂಧ ಕೆಇಎ ಮಾಹಿತಿ ನೀಡಿದ್ದು, ಕೆಲ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣ ಪತ್ರಗಳಲ್ಲಿ ತಪ್ಪು ಕಂಡು ಬಂದಿದೆ. ಗ್ರಾಮೀಣ ಪ್ರದೇಶ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಾಣ ಪತ್ರದಲ್ಲಿ ವ್ಯತ್ಯಾಸವಿದೆ. ಇಂತಹ ಅಭ್ಯರ್ಥಿಗಳು ಸೆಪ್ಟೆಂಬರ್ 12ರ ನಾಳೆ ಮತ್ತು ಸೆ.13ರ ನಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ, ದಾಖಲೆಗಳನ್ನು ಸರಿಪಡಿಸಿಕೊಂಡು ನೀಡಬಹುದು ಎಂದು ಹೇಳಿದೆ.
ಕೆಲ ಅಭ್ಯರ್ಥಿಗಳು 1-4 ನೇ ತರಗತಿ ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದ್ರೇ ಆ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ 1 ರಿಂದ 3ನೇ ತರಗತಿವರೆಗೆ ಮಾತ್ರ ಅಭ್ಯಾಸ ಮಾಡಿರುವುದನ್ನು ಪರಿಶೀಸಿಲಸಾಗಿದೆ. 4ನೇ ತರಗತಿಯನ್ನು ಬೇರೆ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ಆ ಶಾಲೆ ಮೊದಲಿನ ಬಿಇಒ ಕಚೇರಿಯ ವ್ಯಾಪ್ತಿಗೆ ಬರದಿದ್ದರೇ ಸಂಬಂಧಪಟ್ಟ ಬಿಇಒ ಕಚೇರಿಯಿಂದ ಪತ್ರ ಪಡೆಯಬೇಕಾಗಿರುತ್ತದೆ ಎಂದು ತಿಳಿಸಿದೆ.
Bangalore Rain: ಬೆಂಗಳೂರಿಗರ ಗಮನಕ್ಕೆ: ಮುಂದಿನ ಮೂರು ತಿಂಗಳು ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಇದೇ ಮಾದರಿಯಲ್ಲಿ 8 ರಿಂದ 10ನೇ ತರಗತಿ ವ್ಯಾಸಂಗದ ಪ್ರಾಮಾಣ ಪತ್ರದಲ್ಲಿಯೂ ಸಮಸ್ಯೆ ಇದೆ. ಆ ಸಮಸ್ಯೆಯನ್ನು ವಿದ್ಯಾರ್ಥಿಗಳು ಸಂಬಂಧ ಪಟ್ಟ ಬಿಇಒ ಕಚೇರಿಗೆ ತೆರಳಿ, ಸರಿಪಡಿಸಿ, ದಾಖಲೆಗಳನ್ನು ಸಲ್ಲಿಸಲು ನಾಳೆ, ನಾಡಿದ್ದು ಅವಕಾಶ ನೀಡಲಾಗಿದೆ ಎಂದು ಹೇಳಿದೆ.