ಮಡಿಕೇರಿ : ಕೊಡಗು ಜಿಲ್ಲೆಯ ಪ್ರಸಿದ್ದ ತಾಣ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ, ಹೌದು, ತಾತ್ಕಾಲಿಕವಾಗಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದು, ನವೆಂಬರ್ 8 ರ ಮಂಗಳವಾರದಿಂದಲೇ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.
ಕಾವೇರಿ ನಿಸರ್ಗ ಧಾಮದ ತೂಗು ಸೇತುವೆ ದುರಸ್ಥಿ ಕಾರ್ಯ ಕೈಗೊಂಡ ಹಿನ್ನೆಲೆ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ, ಆದರೆ ಪ್ರವಾಸಿಗರು ಹಾರಂಗಿ ಸಸ್ಯೋದ್ಯಾಮ ಮತ್ತು ಸಾಕಾನೆ ಶಿಬಿರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅರಣ್ಯ ಇಲಾಖೆ ತೂಗು ಸೇತುವೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿದೆ.
ಕಾವೇರಿ ನಿಸರ್ಗಧಾಮವು ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲನಗರದ ಬಳಿ ಕಾವೇರಿ ನದಿಯಿಂದ ರೂಪುಗೊಂಡ ಸ್ಥಳೀಯ ಜನರಿಂದ ದ್ವೀಪ ಎಂದು ಕರೆಯಲ್ಪಡುವ ಡೆಲ್ಟಾ ಆಗಿದೆ. ಇದು ರಾಜ್ಯ ಹೆದ್ದಾರಿಯಿಂದ ಮತ್ತು ಮಡಿಕೇರಿಯಿಂದ 30 km (19 mi) ದೂರದಲ್ಲಿದ್ದು , ಕುಶಾಲನಗರದಿಂದ ಸರಿಸುಮಾರು 3 km (1.9 mi) ಹಾಗೂ ಮೈಸೂರಿನಿಂದ 95 km (59 mi) ಮತ್ತು ಮಂಗಳೂರಿನಿಂದ 167 km (104 mi) ಅಂತರದಲ್ಲಿರುವ ಕರ್ನಾಟಕದ ಪ್ರವಾಸಿ ತಾಣವಾಗಿದೆ.
ನಿಸರ್ಗಧಾಮವು ಕುಶಾಲನಗರದಿಂದ ಎರಡು ಕಿಲೋಮೀಟರ್ ಮತ್ತು ಮಡಿಕೇರಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಒಂದು ದ್ವೀಪವಾಗಿದೆ. ಈ ದ್ವೀಪವು ಕಾವೇರಿ ನದಿಯಿಂದ ರೂಪಗೊಂಡಿದೆ ಮತ್ತು 64 ಎಕರೆಗಳಷ್ಟು ವಿಸ್ತಾರವಾಗಿದೆ. ಸುಂದರವಾದ ಪಿಕ್ನಿಕ್ ಸ್ಥಳವು ದಟ್ಟವಾದ ಬಿದಿರಿನ ತೋಪುಗಳು, ಶ್ರೀಗಂಧದ ಮರಗಳ ಎಲೆಗಳಿಂದ ಕೂಡಿದೆ. ನದಿತೀರದ ಕುಟೀರಗಳು, ಆನೆ ಸವಾರಿ ಮತ್ತು ಬೋಟಿಂಗ್ ಇಲ್ಲಿನ ಇತರ ಕೆಲವು ಜನಪ್ರಿಯ ಆಕರ್ಷಣೆಗಳಾಗಿವೆ. ನಿಸರ್ಗಧಾಮವು ಅರಣ್ಯ ಇಲಾಖೆ ನಡೆಸುವ ಅತಿಥಿಗೃಹ ವನ್ನು ಹೊಂದಿದೆ.
BIGG NEWS : `SC-ST’ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
BIGG NEWS: ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್: ಪ್ರಸಾದ ವ್ಯವಸ್ಥೆಯಲ್ಲಿ ಬದಲಾವಣೆ