ಬೆಂಗಳೂರು: ಕನ್ನಡ ಭಾಷಾಂತರ ಎಡವಟ್ಟಿನ ಕಾರಣದಿಂದ ರದ್ದುಗೊಂಡಿದ್ದಂತ 384 ಕೆಎಎಸ್ ನೇಮಕಾತಿಗೆ ಮರು ಪರೀಕ್ಷೆ ನಡೆಸಲು ಡಿಸೆಂಬರ್.29ರಂದು ದಿನಾಂಕ ನಿಗದಿ ಪಡಿಸಲಾಗಿದೆ.
ಈ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು ಕನ್ನಡ ಭಾಷಾಂತರ ಪರೀಕ್ಷೆಯ ಸಮಸ್ಯೆಯಿಂದ ಕೆಎಎಸ್ ಪರೀಕ್ಷೆ ರದ್ದುಗೊಂಡಿತ್ತು. ಈ ಪರೀಕ್ಷೆಯನ್ನು ಡಿಸೆಂಬರ್.29ರಂದು ನಡೆಸಲು ನಿಗದಿ ಪಡಿಸಲಾಗಿದೆ ಎಂದಿದೆ.
ಡಿಸೆಂಬರ್.29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪೇಪರ್-1ರ ಪರೀಕ್ಷೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4 ಗಂಟೆಯವರೆಗೆ ಪೇಪರ್-2 ಪರೀಕ್ಷೆಯನ್ನು ನಡೆಸುತ್ತಿರುವುದಾಗಿ ಕೆಪಿಎಸ್ಸಿ ತಿಳಿಸಿದೆ.
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!