ಬೆಂಗಳೂರು: ರಾಜ್ಯ ಸರ್ಕಾರದಿಂದ ಕಾರವಾರದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದಏಶಕ ಜಯಂತ್ ಹೆಚ್.ವಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.
ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಉಲ್ಲೇಖಿತ (1)ರ ಪತ್ರ ಹಾಗೂ ಅಡಕಗಳ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಸದರಿ ಪತ್ರದಲ್ಲಿ ಉಲ್ಲೇಖ (2) ರಂತ ಸಹಾಯಕ ಆಯುಕ್ತರು, ಕಾರವಾರ ರವರು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಲಾಗಿದೆ. ಮುಂದುವರೆದು, ಉಲ್ಲೇಖ (3)ರಂತೆ ಜಿಲ್ಲಾಧಿಕಾರಿ ಕಚೇರಿ ಕೊಠಡಿ ಸಂಖ್ಯೆ:24ರ ಸ್ಥಳವನ್ನು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ ಕಚೇರಿಗೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಹಸ್ತಾಂತರಿಸಲಾಗಿದೆ. ಅದರಂತೆ ಸಹಾಯಕ ಆಯುಕ್ತರು, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಕೊಠಡಿ ಸಂಖ್ಯೆ:24ಕ್ಕೆ ಸ್ಥಳಾಂತರಿಸಿ ಉಲ್ಲೇಖ (4)ರಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಸದರಿಯವರ ವರದಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಹಾಸಿಗೆ ಹಾಗೂ ಮಂಚವನ್ನೊಳಗೊಂಡಂತೆ ವಾಸದ ಮನೆಯ ರೀತಿ ವ್ಯವಸ್ಥೆ ಇರುವುದಾಗಿ ವರದಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.
ಈ ಕುರಿತಂತೆ ಜಯಂತ್ ಹೆಚ್.ವಿ., ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ ಹಾಗೂ ಉಪ ನಿರ್ದೇಶಕರು (ಪು), ಪ್ರವಾಸೋದ್ಯಮ ಇಲಾಖೆ ಇವರಿಗೆ ಉಲ್ಲೇಖ (5)ರಲ್ಲಿ ಸೃಷ್ಟಿಕರಣ/ ಸಮಜಾಯಿಷಿ ಕೋರಿದ್ದು, ಸದರಿ ಪತ್ರಕ್ಕೆ ಅವರಿಂದ ಈವರೆಗೂ ಯಾವುದೇ ಸಮಜಾಯಿಷಿ ಬಂದಿರುವುದಿಲ್ಲವಂದು ಜಿಲ್ಲಾಧಿಕಾರಿಗಳು ವರದಿ ಮಾಡುತ್ತಾ, ಸದರಿ ಹಾಸಿಗೆ ಮತ್ತು ಮಂಚವನ್ನೊಳಗೊಂಡಂತೆ ವಾಸದ ಮನೆಯ ರೀತಿಯ ವ್ಯವಸ್ಥೆಯನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತು ಎಂಬ ಇದುವರೆಗೂ ಸೃಷ್ಟಿಕರಣ ನೀಡದೇ ಇರುವುದಿಂದ, ಇವರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಉಲ್ಲೇಖಿತ (1)ರ ಪತ್ರದಲ್ಲಿ ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಶಿಫಾರಸ್ಸಿನನ್ವಯ ಜಿಲ್ಲಾಧಿಕಾರಿಗಳ ಪತ್ರಕ್ಕೆ ಸಮಜಾಯಿಷಿ/ಸೃಷ್ಟಿಕರಣ ನೀಡದೇ ಕರ್ತವ್ಯ ಲೋಪವೆಸಗಿ, ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಜಯಂತ್ ಹೆಚ್.ವಿ., ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರವಾರ ಹಾಗೂ ಉಪ ನಿರ್ದೇಶಕರು (ಪ), ಪ್ರವಾಸೋದ್ಯಮ ಇಲಾಖೆ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತುಗೊಳಿಸಲು ಈ ಮೂಲಕ ಶಿಫಾರಸ್ಸು ಮಾಡುತ್ತಾ, ಸದರಿಯವರು ಮೂಲತಃ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧಿಕಾರಿಯಾಗಿರುವುದರಿಂದ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಸಂಸದ ಬಸವರಾಜ ಬೊಮ್ಮಾಯಿ
BIG NEWS: NPS ರದ್ದು, OPS ಜಾರಿಗೆ ಸಿಎಂ, ಡಿಸಿಎಂ ಸ್ಪಷ್ಟ ಸಂದೇಶ: ಸಿಎಸ್ ಷಡಕ್ಷರಿ