ಉತ್ತರಕನ್ನಡ : ನಾಳೆ ಕಾರವಾರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂಕೋಲಾ ಹಾಗೂ ಕಾರವಾರ ಹಾಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಗೋವಾ ರೆಸಾರ್ಟ್ ರಾಜಕಾರಣ ನಡೆಯುತ್ತಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಾಜಿ ಶಾಸಕಿ ರೂಪಾಲಿ ನಾಯಕ್ ಪ್ರತಿಷ್ಠೆ ಕಣವಾದ ಈ ಒಂದು ಚುನಾವಣೆಯು, ತಮ್ಮ ಸದಸ್ಯರನ್ನು ಉಳಿಸಿಕೊಂಡು ಇತರರನ್ನು ಸೆಳೆಯಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್ ಬಿಜೆಪಿಯಿಂದ ಗೋವಾ ರೆಸಾರ್ಟ್ ರಾಜಕಾರಣ ನಡೆಯುತ್ತಿದೆ. ತಮ್ಮ ಸದಸ್ಯರನ್ನು ಗೋವಾ ರೆಸಾರ್ಟ್ ನಲ್ಲಿರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
31 ಸದಸ್ಯರ ಬಲದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಸಭೆಯು, ಕಳೆದ ಬಾರಿ ಬಿಜೆಪಿ ಗೆದ್ದಂತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಈ ಬಾರಿ ಯತ್ನಿಸುತ್ತಿದೆ. ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 4 ಇನ್ನು, ಐವರು ಪಕ್ಷೇತರದವರಾಗಿದ್ದಾರೆ.ಬಿಜೆಪಿ ಜೊತೆಗೆ ಇರುವ ಜೆಡಿಎಸ್ ನಾಲ್ವರು ಪಕ್ಷೇತರರು ಬಿಜೆಪಿಗೆ ಸಂಸದ ಕಾಗೇರಿ ಎಂಎಲ್ಸಿ ಗಣಪತಿ ಉಳ್ವೆಕರ್ ಬೆಂಬಲವಿದೆ.
ಬಿಜೆಪಿ ಸದಸ್ಯ ನಂದ ಸಾವಂತನನ್ನು ಕಾಂಗ್ರೆಸ್ ಮುಖಂಡರು ಕರೆದೊಯ್ದಿದ್ದಾರೆ. ಗೋವಾದ ಕಾಣ ಕೋಣದ ರೆಸಾರ್ಟ್ ನಲ್ಲಿ ನಂದ ಸಾವಂತ್ ನನ್ನು ಇರಿಸಿದ್ದಾರೆ.ಅಲ್ಲದೆ ಕಾಂಗ್ರೆಸ್ ಮುಖಂಡರು ಬಿಜೆಪಿಯ ಇತರೆ ಸದಸ್ಯರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್ ಗೆ 11 ಸದಸ್ಯರು ಇಬ್ಬರು ಪಕ್ಷೇತರರು, ಸಚಿವ ಹಾಗೂ ಶಾಸಕರ ಬಲವಿದೆ.
ಹಾಗಾಗಿ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಮೂವರು ಸದಸ್ಯರ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್ ನಂದ ಸಾವಂತ್ ಜೊತೆ ಮತ್ತಿಬ್ಬರು ಸದಸ್ಯರಿಗೆ ಬಲೆ ಹಾಕಿದೆ. ಮತ್ತೊಂದೆಡೆ ಕಾಂಗ್ರೆಸ್ ಸದಸ್ಯರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ.ಮೆಜಾರಿಟಿ ಕಾಪಾಡಿಕೊಂಡು ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.