ಬೆಂಗಳೂರು: ಶಿಕ್ಷಕರ ನೇಮಕಾತಿಗಾಗಿ ( Teacher Recruitment ) ನಡೆಯುವಂತ ಟಿಇಟಿ ಪರೀಕ್ಷೆಗೆ ( KAR TET-2022) ದಿನಾಂಕ ಬಿಡುಗಡೆ ಮಾಡಲಾಗಿದೆ. ಅದು ಪರೀಕ್ಷೆ ಹಾಜರಾಗುವಂತ ಅಭ್ಯರ್ಥಿಗಳು ಶೂ ಹಾಗೂ ಬೆಲ್ಟ್ ಧರಿಸಿ ಬರುವಂತಿಲ್ಲ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಆದೇಶಿಸಿದೆ.
‘BBMP’ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : 100 % ರಿಸಲ್ಟ್ ಬಂದ್ರೆ ‘ಫಾರಿನ್ ಟ್ರಿಪ್’ ಭಾಗ್ಯ |Foreign Trip
ಈ ಕುರಿತಂತೆ ಸೂಚನೆ ಬಿಡುಗಡೆ ಮಾಡಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳು, ದಿನಾಂಕ 06-11-2022ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( Karnataka Teacher Eligibility Test – TET ) ನಡೆಯಲಿದೆ. ಈ ಪರೀಕ್ಷೆಗೆ ದಿನಾಂಕ 25-10-2022ರಂದು ಅಭ್ಯರ್ಥಿಗಳಿಗೆ ಪ್ರಕಟಿಸಲಾಗಿದ್ದಂತ ಸೂಚನೆಗಳಲ್ಲಿ ಮಾರ್ಪಡಿಸಲಾಗಿದೆ ಎಂದಿದ್ದಾರೆ.
ಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ? – ಕಾಂಗ್ರೆಸ್
ಟಿಇಟಿ ಪರೀಕ್ಷೆಗೆ ದಿನಾಂಕ 06-11-2022ರಂದು ಹಾಜರಾಗುವಂತ ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ. ಇದಲ್ಲದೇ ಪ್ರವೇಶ ಪತ್ರದಲ್ಲಿ ತಮ್ಮ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ, ಸಹಿ ಮತ್ತು ಭಾವಚಿತ್ರ ವ್ಯತ್ಯಾಸವಿರುವ ಅಭ್ಯರ್ಥಿಯು ತನ್ನೊಂದಿಗೆ ಆನ್ ಲೈನ್ ಅರ್ಜಿ, ತಮ್ಮ ಇತ್ತೀಚಿನ ಭಾವಷಿತ್ರ ಮತ್ತು ಆಧಾರ್ ಕಾರ್ಡ್, ಇಲ್ಲವೇ ಇತರೆ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ತೋರಿಸುವಂತೆ ತಿಳಿಸಿದ್ದಾರೆ.