ಬೆಂಗಳೂರು: ಕರ್ನಾಟಕ ಸ್ಟೇಟ್ ಫೈರ್ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಟ್ವಿಟರ್ ಖಾತೆಯನ್ನು ಸೈಬರ್ ಖದೀಮರು ಹ್ಯಾಕ್ ಮಡಿದ್ದಾರೆ ಎಂದು ತಿಳಿದುಬಂದಿದೆ.
ಖಾತೆ ಹ್ಯಾಕ್ ಮಾಡಿ ಸಿಕ್ಕ ಸಿಕ್ಕ ಪೋಸ್ಟ್ ಗಳನ್ನು ಕಿಡಿಗೇಡಿಗಳು ಹಾಕಿದ್ದಾರೆ. ಇದನ್ನ ಗಮನಸಿದ ಫಾರೆಸ್ಟ್ ಡಿಜಿಟಲ್ ಕಮ್ಯುನಿಕೇಷನ್ ತಂಡದಿಂದ ಕರ್ನಾಟಕ ಸ್ಟೇಟ್ ಫೈರ್ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆ ಖದೀಮರಿಗಾಗಿ ಹುಡುಕಾಟ ಶುರುವಾಗಿದೆ.