ಬೆಂಗಳೂರು: ರಾಜ್ಯ ಸರ್ಕಾರದಿಂದ 2021ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ನಟ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ. ಮ್ಯೂಟ್ ಸಿನಿಮಾದ ನಟನೆಗಾಗಿ ಅರ್ಚನಾ ಜೋಯಿಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಇನ್ನೂ ದೊಡ್ಡಹಟ್ಟಿ ಬೈರೇಗೌಡ ಚಿತ್ರಕ್ಕೆ ಅತ್ಯುತ್ತಮ ಮೊದಲ ಚಿತ್ರ, ಯುವರತ್ನಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಲಭಿಸಿದೆ.ರತ್ನನ್ ಪ್ರಪಂಚ ಚಿತ್ರದ ಅಭಿನಯಕ್ಕಾಗಿ ಪ್ರಮೋದ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೇ, ಉಮಾಶ್ರಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಕೇಕ್ ಚಿತ್ರದ ನಟನೆಗಾಗಿ ಮಾಸ್ಟರ್ ಅತೀಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದ್ದರೇ, ಭೈರವಿ ಚಿತ್ರದ ಅಭಿನಯಕ್ಕಾಗಿ ಬೇಬಿ ಭೈರವಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ನೀಡಲಾಗಿದೆ.
ಇನ್ನೂ ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಪ್ರಶಸ್ತಿಯನ್ನು ‘ಭಾರತದ ಪ್ರಜೆಗಳಾದ ನಾವು’ ಸಿನಿಮಾಗೆ ಸಂದಿದ್ದರೇ, ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಚಿತ್ರಕ್ಕೆ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ’ ಪ್ರಶಸ್ತಿ ಲಭಿಸಿದೆ. ‘ಕೇಕ್’ ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಂದಿದೆ. ಶಂಕರ್ ಗುರು ಅವರಿಗೆ ‘ಬಡವ ರಾಸ್ಕಲ್’ ಚಿತ್ರಕ್ಕಾಗಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿ ಘೋಷಿಸಲಾಗಿದೆ.
ಹೀಗಿದೆ 2021ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪುರಸ್ಕೃತರ ಪಟ್ಟಿ
‘ರಾಜ್ಯ ಸರ್ಕಾರಿ ನೌಕರರಿ’ಗೆ ‘ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಮಹತ್ವದ ಮಾಹಿತಿ | KASS Scheme
ALERT : ಧೂಮಪಾನಿಗಳೇ ಎಚ್ಚರ : `ಸಿಗರೇಟ್’ನಿಂದ ಈ ಗಂಭೀರ ಕಾಯಿಲೆಗಳು ಬರಬಹುದು.!
BREAKING : ಶೀಘ್ರದಲ್ಲೇ ಮದುವೆ ಆಗ್ತೀನಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್