ಬೆಂಗಳೂರು: ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯ ಬೀಜ ನಿಗಮ ನಿಯಮಿತದ ಬೆಂಗಳೂರು ಇಲ್ಲಿ ಲಭ್ಯವಿರುವಂತ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಈ ಕೆಳಕಂಡ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.
ನೀವು ‘ಹೊಸ BPL, APL ಪಡಿತರ ಚೀಟಿ’ಗಾಗಿ ಅರ್ಜಿ ಸಲ್ಲಿಸಬೇಕಾ.? ಹಾಗಿದ್ದರೇ ಈ ವಿಧಾನ ಅನುಸರಿಸಿ.! New Ration Card
ಹುದ್ದೆಗಳ ವಿವರ
- ಸಹಾಯಕ ವ್ಯವಸ್ಥಾಪಕರು ( ಕಾರ್ಯಾಚರಣೆ ) -16 ಹುದ್ದೆಗಳು
- ಹಿರಿಯ ಸಹಾಯಕರು – 01 ಹುದ್ದೆ
- ಕಿರಿಯ ಸಹಾಯಕರು – 09 ಹುದ್ದೆ
- ಬೀಜ ಸಹಾಯಕರು – 06 ಹುದ್ದೆ
ಈ ಮೇಲ್ಕಂಡ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆನ್ ಲೈನ್ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಕೆ ವಿಧಾನ
ಅರ್ಹ ಅಭ್ಯರ್ಥಿಗಳು http://kea.kar.nic.in ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯು ದಿನಾಂಕ 04-07-2022ರ ಇಂದಿನಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ದಿನಾಂಕ 03-08-2022 ಕೊನೆಯಾಗಿದೆ. ಇ-ಪೋಸ್ಟ್ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 05-08-2022 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.