ನವದೆಹಲಿ: ನೀತಿ ಆಯೋಗದ ʼಇಂಡಿಯಾ ಇನ್ನೋವೇಶನ್ ಇಂಡೆಕ್ಸ್ʼ ನ ಮೂರನೇ ಮತ್ತು ಇತ್ತೀಚಿನ ಆವೃತ್ತಿಯಲ್ಲಿ ಕರ್ನಾಟಕ, ಮಣಿಪುರ ಮತ್ತು ಚಂಡೀಗಢ ಅಗ್ರಸ್ಥಾನ ಪಡೆದಿವೆ.
BREAKING NEWS: ಉತ್ತರ ಇರಾಕ್ ನಲ್ಲಿ ಟರ್ಕಿ ದಾಳಿ: 8 ಪ್ರವಾಸಿಗರ ದುರ್ಮರಣ
ಪ್ರಮುಖ ರಾಜ್ಯಗಳು ವಿಭಾಗದಲ್ಲಿ ಕರ್ನಾಟಕವು ಮತ್ತೆ ಅಗ್ರಸ್ಥಾನದಲ್ಲಿದ್ದರೆ, ಮಣಿಪುರವು ‘ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು’ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಚಂಡೀಗಢವು ‘ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳು’ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ತಿಳಿಸಿದೆ.
ಆವಿಷ್ಕಾರ ಸೂಚ್ಯಂಕದ ಮೂರನೇ ಆವೃತ್ತಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಅವರು ಸದಸ್ಯ ವಿ.ಕೆ.ಸಾರಸ್ವತ್, ಸಿಇಒ ಪರಮೇಶ್ವರನ್ ಅಯ್ಯರ್ ಮತ್ತು ಹಿರಿಯ ಸಲಹೆಗಾರ ನೀರಜ್ ಸಿನ್ಹಾ ಮತ್ತು ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟಿಟಿವ್ನೆಸ್ ಅಧ್ಯಕ್ಷ ಅಮಿತ್ ಕಪೂರ್ ಅವರ ಉಪಸ್ಥಿತಿಯಲ್ಲಿ ದಾಖಲೆಗನಳನ್ನು ಬಿಡುಗಡೆ ಮಾಡಿದರು.