ಧಾರವಾಡ: ರಾಜ್ಯ ಸರ್ಕಾರ ಹೈಕೋರ್ಟ್ ಸೂಚನೆಯಂತೆ ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತಕ್ಕೆ ( Karnataka Lokayukta ) ಅಧಿಕಾರ ನೀಡಿದೆ. ಆದ್ರೇ ಲೋಕಾಯುಕ್ತಕ್ಕೆ ಅಧಿಕಾರದ ಜೊತೆಗೆ, ಸೂಕ್ತ ಸಿಬ್ಬಂದಿ ನೀಡಿದಾಗ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಣೆಯಾಗಲಿದೆ. ಭ್ರಷ್ಟರ ಬೇಟೆಯಾಡಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ಸಾಧ್ಯವಾಗಲಿದೆ ಎಂಬುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಲೋಕಾಯುಕ್ತ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳು ಆಗಬೇಕಿದೆ. ಆ ಬಗ್ಗೆ ಏನಾದ್ರೂ ಸಲಹೆ ಬೇಕಾದ್ರೆ ನೀಡುತ್ತೇನೆ. ಯಾಕೆಂದ್ರೇ 5 ವರ್ಷ ಲೋಕಾಯುಕ್ತದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
Bangalore Rain: ಬೆಂಗಳೂರಿಗರ ಗಮನಕ್ಕೆ: ಮುಂದಿನ ಮೂರು ತಿಂಗಳು ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಲೋಕಾಯುಕ್ತ ಮುಚ್ಚುವಂತ ಹುನ್ನಾರ ನಡೆಸಿದ್ರು, ಆದ್ರೇ ಅದು ಸಾಧ್ಯವಾಗಲಿಲ್ಲ. ಎಸಿಬಿ ರದ್ದುಗೊಂಡು, ಮತ್ತೆ ಲೋಕಾಯುಕ್ತಕ್ಕೆ ಅಧಿಕಾರ ಬಂದಿದೆ. ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟರೇ ಸಾಲದು, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಅಷ್ಟೇ ಪ್ರಾಮಾಣದಲ್ಲಿ ಸಿಬ್ಬಂದಿಗಳನ್ನು ನೀಡಬೇಕು ಎಂದು ತಿಳಿಸಿದರು.