ಬೆಂಗಳೂರು: ಹೈಕೋರ್ಟ್ ಆದೇಶವನ್ನು ಮನ್ನಿಸಿ ಸಿದ್ಧಪಡಿಸಿರುವ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ( CET Ranking List ) ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examination authority – KEA ) ಪ್ರಕಟಿಸಿದೆ.
ಈ ಕುರಿತಂತೆ ಕೆಇಎ ಮಾಹಿತಿ ನೀಡಿದ್ದು, ಹೈಕೋರ್ಟ್ ಆದೇಶದಂತೆ ಸಿದ್ಧಪಡಿಸಲಾಗಿರುವಂತ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ( CET Results ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ karresults.nic.in ನಲ್ಲಿ ನೋಡಬಹುದು ಎಂದು ತಿಳಿಸಿದೆ.