ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಇಂದು ಹೊಸದಾಗಿ 1329 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಐವರು ಸಾವನ್ನಪ್ಪಿದ್ದಾರೆ.
Viral Video: ವ್ಹಾ! ಈ ಮಗುವಿನ ‘ರಾಷ್ಟ್ರಪ್ರೇಮ’ಕ್ಕೆ ಸೆಲ್ಯೂಟ್.! ಜೈ ಹಿಂದ್.!
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರ 791, ದಾವಣಗೆರೆ 30, ಬಳ್ಳಾರಿ 50, ಧಾರವಾಡ 38, ಹಾಸನ 55, ಕೊಡಗು 21, ಮಂಡ್ಯ 25, ಮೈಸೂರು 38 ಕೊರೋನಾ ಕೇಸ್ ದೃಢಪಟ್ಟಿದೆ ಎಂದು ತಿಳಿಸಿದೆ.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಇನ್ನೂ ರಾಯಚೂರು 46, ಶಿವಮೊಗ್ಗ 25, ತುಮಕೂರು 22, ಉತ್ತರ ಕನ್ನಡ ಜಿಲ್ಲೆಯಲ್ಲಿ 21 ಸೇರಿದಂತೆ ರಾಜ್ಯಾಧ್ಯಂತ 1329 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 4029446ಗೆ ಏರಿಕೆಯಾಗಿದೆ. ಇವರಲ್ಲಿ ಇಂದು 1614 ಮಂದಿ ಸೇರಿದಂತೆ 3979155 ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಈಗ 10105 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ ಹುಷಾರು.!
ಕಳೆದ 24 ಗಂಟೆಯಲ್ಲಿ ಬಳ್ಳಾರಿ 01, ಧಾರವಾಡ 02, ಕಲಬುರ್ಗಿ 01 ಮತ್ತು ಶಿವಮೊಗ್ಗ 01 ಸೇರಿದಂತೆ ಐವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 40144ಕ್ಕೆ ಏರಿಕೆಯಾಗಿದೆ.