ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಪ್ರತಿಕ್ರಿಯಿಸಿದ 23 ವರ್ಷದ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಇಂದು ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಣಸೂರು ಸಮೀಪದ ಅಂಗತಳ್ಳಿ ಗ್ರಾಮದ ನಿವಾಸಿ ಎಚ್.ಬೀರೇಶ್ ಎಂಬಾತನನ್ನು ಕೊಲೆ ಮಾಡಿದ್ದ ನಿತಿನ್ ಅಲಿಯಾಸ್ ವಟಾರ (23), ಮನೋಜ್ ಕುಮಾರ್ ಅಲಿಯಾಸ್ ಮೋಟು (24) ಮತ್ತು ಪೋತರಾಜ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಏನಿದು ಪ್ರಕರಣ?
ಪೊಲೀಸ ಮೂಲಗಳ ಪ್ರಕಾರ, ನಿತಿನ್ ಎಂಬಾತನ ಪತ್ನಿಯ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಬೀರೇಶ್ ಅಸಭ್ಯವಾಗಿ ಕಾಮೆಂಟ್ ಪೋಸ್ಟ್ ಮಾಡಿದ್ದ. ಈ ಕಾಮೆಂಟ್ ನವವಿವಾಹಿತ ನಿತಿನ್ಗೆ ಮನನೊಂದಿದ್ದು, ಇನ್ನಿಬ್ಬರ ಸಹಾಯದಿಂದ ಬೀರೇಶ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಜುಲೈ 12 ರಂದು ನಿತಿನ್ ಮತ್ತು ಮನೋಜ್ ಬಸ್ ನಿಲ್ದಾಣದ ಬಳಿ ಬೀರೇಶ್ನನ್ನು ಕಂಡು ಬೈಕ್ನಲ್ಲಿ ಹತ್ತಿಸಿಕೊಂಡರು.ಈ ವೇಳೆ ಬೀರೇಶ್ನ ಕುತ್ತಿಗೆ, ಭುಜಕ್ಕೆ ಚಾಕುವಿನಿಂದ ಇರಿದಿದ್ದು, ನಂತ್ರ ಬೈಕ್ನಿಂದ ತಳ್ಳಿ ಇಬ್ಬರೂ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಬೀರೇಶ್ನನ್ನು ಕಂಡ ದಾರಿಹೋಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ಕೆ.ಆರ್. ಮೈಸೂರಿನ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ಮಾರನೇ ದಿನ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ್ ಸಾವನ್ನಪ್ಪಿದ್ದನು. ಈ ಸಂಬಂಧ ಬೀರೇಶ್ ಕುಟುಂಬದವರಿಂದ ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಮೂರನೇ ಆರೋಪಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ, ತನಿಖೆ ಮುಂದುವರೆದಿದೆ.
ಜಿಮ್ ಉದ್ಯೋಗಿಯಾಗಿದ್ದ ನಿತಿನ್ ಮತ್ತು ಕಲ್ಕುಣಿಕೆ ನಿವಾಸಿ ಮನೋಜ್ ಇಬ್ಬರೂ ಬೀರೇಶ್ನ ಸ್ನೇಹಿತರಾಗಿದ್ದಾರೆ.
BIGG NEWS : ಡಿ.ಕೆ. ಶಿವಕುಮಾರ್ ಬಹಳ ವರ್ಷಗಳಿಂದ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿ
BIGG NEWS : ರಾಜ್ಯದಲ್ಲಿ ಹಿಜಾಬ್, ಹಲಾಲ್ ಬಳಿಕ ಮತ್ತೊಂದು ಫೈಟ್ : ಮದರಾಸಗಳಲ್ಲಿ ಪಠ್ಯ ಪರಿಷ್ಕರಣೆಗೆ ಚಿಂತನೆ