ಹಾಸನ: ಕನ್ನಡದ ಸಾಹಿತಿ ಭಾನು ಮುಷ್ತಾಕ್ ಅವರ ಕೃತಿಯು ಬೂಕರ್ ಅವರಾಡ್ ಶಾರ್ಟ್ ಲೀಸ್ಟ್ ನಲ್ಲಿ ಸ್ಥಾನ ಪಡೆದಿದೆ. ಈ ರೀತಿಯಾಗಿ ಬೂಕರ್ ಪ್ರಶಸ್ತಿಯ ಶಾರ್ಟ್ ಲೀಸ್ಟ್ ನಲ್ಲಿ ಹೆಸರು ಪಡೆದಂತ ಕನ್ನಡದ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವಂತ ಸಾಹಿತಿ ಭಾನು ಮುಷ್ತಾಕ್ ಅವರು, ನನ್ನ ಕೃತಿ ಬೂಕರ್ ಅವಾರ್ಡ್ ಶಾರ್ಟ್ ಲೀಸ್ಟ್ ಪಡೆದಿರುವುದು ಸಂತಸ ತಂದಿದೆ. ನನ್ನ ನೆರೆ ಜಿಲ್ಲೆಯ ದೀಪಾ ಬಸ್ತಿಯವರು ಇಂಗ್ಲೀಷ್ ಗೆ ನನ್ನು ಕೃತಿಯಾದಂತ ಹಸೀನಾ ಮತ್ತು ಇತರೆ ಕತೆಗಳನ್ನು ಅನುವಾದಿಸಿದ್ದರು ಎಂದರು.
ಹಸೀನಾ ಮತ್ತು ಇತರೆ ಕತೆಗಳು ಕೃತಿ ಇಂಗ್ಲೀಷಿನಲ್ಲಿ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಪ್ರಕಟವಾಗಿತ್ತು. ಈ ಕೃತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ಓದುಗರನ್ನು ಸೆಳೆದಿತ್ತು. ಇಂತಹ ಕೃತಿ ಬೂಕರ್ ಅವಾರ್ಡ್ ಶಾರ್ಟ್ ಲೀಸ್ಟ್ ನಲ್ಲಿ ಸ್ಥಾನ ಪಡೆದಿದೆ ಎಂಬುದಾಗಿ ತಿಳಿಸಿದರು.
ಬೂಕರ್ ಅವಾರ್ಡ್ ಬಗ್ಗೆ ನನಗೆ ಅರಿವೇ ಇರಲಿಲ್ಲ. ತಳ ಸಮುದಾಯದ ಹೆಣ್ಣುಮಗಳಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ಕೃತಿ ಬೂಕರ್ ಅವಾರ್ಡ್ ಶಾರ್ಟ್ ಲೀಸ್ಟ್ ನಲ್ಲಿ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂಬುದಾಗಿ ಖಷಿಯನ್ನು ವ್ಯಕ್ತ ಪಡಿಸಿದರು.
ಈ ಕುರಿತಂತೆ ಫೇಸ್ ಬುಕ್ ನಲ್ಲೂ ಸಾಹಿತಿ ಭಾನು ಮುಷ್ತಕ್ ಅವರು ಈ ರೀತಿ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.
ಅತ್ಯಂತ ಸಂತೋಷದ ಸುದ್ದಿಒಂದನ್ನು ನಿಮ್ಮ ಜೊತೆಯಲ್ಲಿ ಶೇರ್ ಮಾಡಿಕೊಳ್ಳ ಬೇಕಾಗಿದೆ.
2023 ನೇ ಇಸವಿಯಲ್ಲಿ ನನ್ನದೊಂದು ಕಥಾ ಸಂಕಲನ” ಹೆಣ್ಣು ಹದ್ದಿನ ಸ್ವಯಂವರ” ಪ್ರಕಟ ವಾಯಿತು. ಆ ಕಥಾ ಸಂಕಲನಕ್ಕೆ ಬಿದರಹಳ್ಳಿ ನರಸಿಂಹಮೂರ್ತಿಯವರು ಮುನ್ನುಡಿ ಯನ್ನು ಬರೆದರು. ಅದರಲ್ಲಿ” ಬಾನು ಮುಷ್ತಾಕ್ ರವರ ಬರಹ ಯಾವ ಮುಲಾಜಿಗೂ ಒಳಗಾಗದು. ಸೆನ್ಸಾರ್ ಮಾಡಿದ ಅರ್ಧ ಸತ್ಯ ಅನಾವರಣ ಮಾಡದು. ಅವರದು ಪುಟ್ಟ ಪೂರಾ ವರ್ಲ್ಡ್ ಕ್ಲಾಸ್ ಮಾನವತವಾದ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರ ದಿವಂಗತ ತಾಯಿಯ ಸ್ಮರಣಾರ್ಥ ನೀಡಿದ ಮೊಟ್ಟ ಮೊದಲ ಫಲ್ಗು ಪ್ರಶಸ್ತಿಯನ್ನು ನನಗೆ ನೀಡಿದ ಸಂದರ್ಭದಲ್ಲಿ ವಿಶ್ವ ದರ್ಜೆಯ ಕಥಾ ಸಾಹಿತ್ಯ ಎಂತಲೂ ಅಭಿನಂದನೆಯ ನುಡಿಗಳನ್ನು ನುಡಿದರು. ಅವರ ಅಭಿಮಾನ ಪೂರ್ವ ನುಡಿಗಳಿಂದ ನನಗೆ ಸಂತೋಷವಾಯಿತು. ಅವರು ಯಾವುದೇ ಮುಲಾಜಿಗೆ ಒಳಗಾಗುವವರಲ್ಲ ಮತ್ತು ಸ್ಪಷ್ಟ ನುಡಿಯ ತಜ್ಞ ವಿಮರ್ಶಕ ಎಂದು ನನಗೆ ತಿಳಿದಿತ್ತು. ಹೀಗಾಗಿ ಅಷ್ಟೊಂದು ಎತ್ತರದಲ್ಲಿ ನನ್ನನ್ನು ಕಲ್ಪಿಸಿಕೊಳ್ಳಲಾಗದೆ ನಾನು ನಕ್ಕು ಸುಮ್ಮನಾದೆ. ಆದರೆ ಅವರ ಅಭಿಮಾನದ ಮತ್ತು ಹಾರೈಕೆಯ ನುಡಿಗಳು ಫಲಿಸಿದವು.
ನನ್ನ 12 ಕಥೆಗಳ ಇಂಗ್ಲೀಷ್ ಅನುವಾದವನ್ನು ದೀಪಾ ಭಾಸ್ತಿ ಮಾಡಿದರು. ಆಗಾಗ್ಯೆ ನಿಮ್ಮ ಜೊತೆಯಲ್ಲಿ ಸಂವಹನ ಮಾಡಿಕೊಳ್ಳುತ್ತಲೇ ಇದ್ದೇನೆ, ಇಂಗ್ಲಿಷಿನಲ್ಲಿ “ಹಾರ್ಟ್ ಲ್ಯಾಂಪ್” ಶೀರ್ಷಿಕೆಯ ಸದರಿ ಕಥಾ ಸಂಕಲನದ ಅನುವಾದದ ಬಗ್ಗೆ ಅಂತರರಾಷ್ಟ್ರೀಯ ಪೆನ್ ಟ್ರಾನ್ಸ್ಲಟ್ಸ್ ಪ್ರಶಸ್ತಿ ದೊರಕಿತು. ನಂತರ ನನ್ನ ಕಥೆ ರೆಡ್ ಲುಂಗಿ ಯ ಅನುವಾದ 2024ರ ಜೂನ್ ಜುಲೈ ತಿಂಗಳ ದ ಪ್ಯಾರಿಸ್ ರಿವ್ಯೂ ಮ್ಯಾಗಝೀನ್ ನಲ್ಲಿ ಪ್ರಕಟವಾಯಿತು. ಸಂಕಲನದ ಇನ್ನೊಂದು ಕಥೆ ” ಒಮ್ಮೆ ಹೆಣ್ಣಾಗು ಪ್ರಭುವೆ” ಯ ಅನುವಾದ ಇನ್ನೊಂದು ಸಾಹಿತ್ಯಕ ಪತ್ರಿಕೆ ಯಾದ “ದಿ ಬ್ಯಾಫ್ಲರ್” ನಲ್ಲಿ ಪ್ರಕಟವಾಯಿತು.
ಇದೀಗ ಸದರಿ ಕಥಾ ಸಂಕಲನವು ಅಮೆರಿಕದಲ್ಲಿ ಹಾಗೂ ಬ್ರಿಟನ್ ನಲ್ಲಿ ಅಂಡ್ ಅದರ್ ಸ್ಟೋರೀಸ್ ಪ್ರಕಾಶನ ಸಂಸ್ಥೆಯಿಂದ ಮತ್ತು ಭಾರತದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂದ 2025ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಪ್ರಕಟಣಾ ಪೂರ್ವದಲ್ಲಿಯೇ ಸದರಿ ಕಥಾ ಸಂಕಲನವಾದ ಹಾರ್ಟ್ ಲ್ಯಾಂಪ್ 2025 ರ ಅಂತರ ರಾಷ್ಟ್ರೀಯ ಬುಕ್ಕರ್ ಬಹುಮಾನದ ಲಾಂಗ್ ಲಿಸ್ಟ್ ಗೆ ಆಯ್ಕೆಯಾಗಿದೆ. ಇದನ್ನು ಓದುತ್ತಿರುವ ನಿಮಗೆಲ್ಲಾ ಅಭಿನಂದನೆಗಳು.
ಈಗ ತಾನೆ ಇಂಡಿಯಾ ದ ನನ್ನ ಪುಸ್ತಕದ ಪ್ರಕಾಶಕರಾದ ಪೆಂಗ್ವಿನ್ ಸಂಸ್ಥೆಯವರು ನನ್ನ ಪ್ರತಿಕ್ರಿಯೆಯನ್ನು ಕೇಳಿದರು.” ನನಗೆ ಅತೀವ ಸಂತೋಷವಾಗಿದೆ. ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಸಂದ ಅತಿ ದೊಡ್ಡ ಗೌರವವಾಗಿದೆ. ಇಂಟರ್ನ್ಯಾಷನಲ್ ಬುಕರ್ ಆಯ್ಕೆ ಸಮಿತಿಗೆ ಧನ್ಯವಾದಗಳು” ಎಂದು ಹೇಳಿದೆ.ಇದು ಮೊಟ್ಟ ಮೊದಲ ಬಾರಿಗೆ ಕನ್ನಡಕ್ಕೆ ಸಂದ ಗೌರವ ಮಾತ್ರವಲ್ಲ. ದಕ್ಷಿಣ ಏಷಿಯಾದ ಭಾಷೆಗೆ ಸಂದ ಮೊಟ್ಟ ಮೊದಲ ಗೌರವ ಎಂದು ಎಲ್ಲರೂ ಸಂಭ್ರಮಿಸುತ್ತಿದ್ದಾರೆ.
ಇನ್ನು ಮುಂದಿನ ಹಂತ ಶಾರ್ಟ್ ಲಿಸ್ಟ್ ಗೆ ಆಯ್ಕೆಯಾಗುವುದು ಮತ್ತು ಇಂಟರ್ನ್ಯಾಷನಲ್ ಬುಕರ್ ಪ್ರೈಸ್ ಗೆ ಅರ್ಹತೆಯನ್ನು ಹೊಂದುವುದು. ನಿಮ್ಮೆಲ್ಲರ ಸಹಕಾರ ಮತ್ತು ಹಾರೈಕೆಗಳು ನನ್ನ ಜೊತೆಯಲ್ಲಿವೆ ಎಂಬ ನಂಬಿಕೆಯೊಡನೆ ಎಂದು ಹೇಳಿದ್ದಾರೆ.
ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ಸೇರಿ 92 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಫಲಿತಾಂಶ
ALERT : ತಲೆಯ ಬಳಿ `ಮೊಬೈಲ್’ ಇಟ್ಟುಕೊಂಡು ಮಲಗುವವರೇ ತಪ್ಪದೇ ಇದನ್ನೊಮ್ಮೆ ಓದಿ.!