ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) 2022ರ ಕನ್ನಡ ರಾಜ್ಯೋತ್ಸವದ ( Kannada Rajyotsava 2022 ) ಪ್ರಯುಕ್ತ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಆಸಕ್ತರಿಂದ ನೊಂದಣಿಗೆ ಆಹ್ವಾನಿಸಿದೆ.
BREAKING NEWS: ಓಲಾ, ಊಬರ್ಗೆ ಬಿಗ್ ರಿಲೀಫ್; ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ( Karnataka Chief Secretary Vandita Sharma ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ-ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು, ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ ಎಂದಿದ್ದಾರೆ.
BIGG NEWS: ಹಾಸನಾಂಬೆ ದರ್ಶನಕ್ಕೆ ಮಳೆರಾಯ ಅಡ್ಡಿ; ಭಕ್ತರ ಸಂಖ್ಯೆ ಗಣನೀಯ ಇಳಿಕೆ
ಕಳೆದ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಾತಿನಿಧಿಕವಾಗಿ ಆಯ್ದ 3 ಕನ್ನಡ ಗೀತೆಗಳ ಸಮೂಹ ಗಾಯನವನ್ನು ವಿನೂತನವಾಗಿ ಲಕ್ಷ ಕಂಠ ಗಾಯನ ಶೀರ್ಷಿಕೆಯಡಿ ರಾಜ್ಯಾಧ್ಯಂತ ಆಯೋಜಿಸಿ, ಯಶಸ್ವಿಗೊಳಿಸಿದ ನಿಟ್ಟಿನಲ್ಲಿ, ಈ ವರ್ಷವೂ ಅಕ್ಟೋಬರ್ 28ರಂದು ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದು, ಈ ವಿಶೇಷ ಕಾರ್ಯಕ್ರಮದಲ್ಲಿ ಒಂದು ಕೋಟಿ ಜನರನ್ನು ಭಾಗಿಯಾಗಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ನೊಂದಣಿಗೆ ಈ ಕ್ರಮ ಅನುಸರಿಸಿ
ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ನೀವು ಹಾಡೋದಕ್ಕೆ ಭಾಗವಹಿಸಲು https://kannadasiri.karnataka.gov.in/kkg/public/ ಲಿಂಕ್ ಕ್ಲಿಕ್ ಮಾಡಿ, ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ನೀವು ನೋಂದಣಿ ಮಾಡಿಕೊಳ್ಳುವ ಮೂಲಕ, ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಈ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ, ಸ್ವಯಂ ಚಾಲಿತ ಆನ್ ಲೈನ್ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.