ನವದೆಹಲಿ : ದೆಹಲಿ ಹಿಟ್ ಅಂಡ್ ರನ್ ನಲ್ಲಿ ಮೃತಪಟ್ಟ ಯುವತಿಯ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯನ್ನು ನಾಚಿಕೆಗೇಡು ಎಂದು ಕರೆದಿರುವ ಕೇಜ್ರಿವಾಲ್, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ವಿರುದ್ಧ ಹೋರಾಡಲು ಸರ್ಕಾರವು ಉತ್ತಮ ವಕೀಲರನ್ನು ನೇಮಿಸುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ಮಗಳಿಗೆ ನ್ಯಾಯ ಸಿಗಿದೆ. ಪ್ರಕರಣದ ಹೋರಾಟಕ್ಕೆ ಅತ್ಯುತ್ತಮ ವಕೀಲರನ್ನು ನೇಮಿಸುತ್ತದೆ. ಸಂತ್ರಸ್ತೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಕೆಯ ಚಿಕಿತ್ಸೆಯ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ. ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು. ಸಂತ್ರಸ್ತೆಯ ಕುಟುಂಬದ ಜೊತೆಗಿದ್ದೇನೆ, ಭವಿಷ್ಯದಲ್ಲಿ ಉದ್ಭವಿಸುವ ಯಾವುದೇ ಅಗತ್ಯವನ್ನು ನಾವು ಪೂರೈಸುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
पीड़िता की माँ से बात हुई।
बेटी को न्याय दिलवायेंगे। बड़े से बड़ा वकील खड़ा करेंगे।
उनकी माँ बीमार रहती हैं। उनका पूरा इलाज करवायेंगे।
पीड़िता के परिवार को दस लाख रुपये का मुआवज़ा देंगे
सरकार पीड़िता के परिवार के साथ है। भविष्य में भी कोई ज़रूरत हुई तो हम पूरा करेंगे
— Arvind Kejriwal (@ArvindKejriwal) January 3, 2023
ದೆಹಲಿಯಲ್ಲಿ ಕಾರು ಎಳೆದೊಯ್ದು ಮೃತಪಟ್ಟ ಯುವತ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದಳು. ಆಕೆತ ತಾಯಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಡಯಾಲಿಸಿಸ್ ಅಗತ್ಯವಿದೆ ಎನ್ನಲಾಗುತ್ತಿದೆ.
ಯುವತಿ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
BREAKING NEWS: ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆ ಫಲಿತಾಂಶ ಪ್ರಕಟ | KPTCL Recruitment