ನವದೆಹಲಿ: ಭಾರತ ರತ್ನ, ಪದ್ಮವಿಭೂಷಣ ಮತ್ತು ಪದ್ಮಭೂಷಣದ ನಂತರ ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಕಂಗನಾ ರನೌತ್ ಅವರಿಗೆ ನೀಡಿ ಗೌರವಿಸಿದ್ದಕ್ಕಾಗಿ ದಕ್ಷಿಣ ಭಾರತದ ನಟಿ ಮತ್ತು ರಾಜಕಾರಣಿ ಜಯಸುಧಾ ಅವರು ಭಾರತ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಜಯಸುಧಾ ಅವರು ತಮ್ಮ ಸಮಕಾಲೀನ ಜಯಪ್ರದಾ ಅವರೊಂದಿಗೆ ಇತ್ತೀಚೆಗೆ ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋ ಅನ್ ಸ್ಟಾಪಬಲ್ ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ಮಾತನಾಡುತ್ತ ಚಲನಚಿತ್ರೋದ್ಯಮದಲ್ಲಿ ದಕ್ಷಿಣದ ಕಲಾವಿದರನ್ನು ಭಾರತ ಸರ್ಕಾರವು ಹೇಗೆ ಗುರುತಿಸುವುದಿಲ್ಲ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಜಯಸುಧಾ ಅವರು ಕಂಗನಾ ಅವರ ಉದಾಹರಣೆಯನ್ನು ನೀಡಿ ಮತ್ತು ಅವರ ನಟನಾ ವೃತ್ತಿಜೀವನದಲ್ಲಿ ಕೇವಲ 10 ಕ್ಕೂ ಹೆಚ್ಚು ಚಲನಚಿತ್ರಗಳೊಂದಿಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಹೇಗೆ ನೀಡಲಾಯಿತು ಅಂಥ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೇ ಅವರು ಆದರೆ ಉದ್ಯಮದಲ್ಲಿ ಅನೇಕ ದಶಕಗಳಿಂದ ಕೆಲಸ ಮಾಡಿದ ನಟರಿಗೆ ಅವರ ಕೆಲಸಕ್ಕಾಗಿ ಮಾನ್ಯತೆಯನ್ನು ನೀಡಲಾಗಿಲ್ಲ ಅಂತ ಕಿಡಿಕಾರಿದ್ದಾರೆ.
“ಕಂಗನಾ ರನೌತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರುವುದು ನನಗೆ ಸರಿ. ಅವರು ಅದ್ಭುತ ನಟಿ. ಆದರೂ, ಅವರು 10 ಚಲನಚಿತ್ರಗಳಲ್ಲಿ ನಟಿಸಿ ಪ್ರಶಸ್ತಿ ಪಡೆದುಕೊಂಡಿರುವುದು ಆಶ್ವರ್ಯ ಮೂಡಿಸಿದೆ . ಇಲ್ಲಿ, ನಾವು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ, ಆದರೆ ಸರ್ಕಾರದಿಂದ ಮಾನ್ಯತೆ ಪಡೆದಿಲ್ಲ ಎಂದು ಜಯಸುಧಾ ಹೇಳಿದರು. ಗಿನ್ನಿಸ್ ರೆಕಾರ್ಡ್ ಹೊಂದಿರುವ ನಿರ್ದೇಶಕಿ ವಿಜಯ ನಿರ್ಮಲಾ ಕೂಡ ಅಂತಹ ಮೆಚ್ಚುಗೆಯನ್ನು ಪಡೆದಿಲ್ಲ ಎಂದು ಅವರು ಹೇಳಿದರು. ದಕ್ಷಿಣವನ್ನು ಸರ್ಕಾರವು ಪ್ರಶಂಸಿಸುತ್ತಿಲ್ಲ ಅಂಥ ಬೇಸರ ವ್ಯಕ್ತಪಡಿಸಿದ್ದಾರೆ.