ಕಲಬುರಗಿ : ಜಿಲ್ಲೆಯಲ್ಲಿ ಹಲವೆಡೆ ವರುಣನ ಆರ್ಭಟ ಹೆಚ್ಚಾಗಿದ್ದು, ನಿರಂತರ ಮಳೆಗೆ ಜೇವರ್ಗಿ ಬಳಿಯಿರುವ ಬೋರಿ ನದಿ ಉಕ್ಕಿ ಹರಿಯುತ್ತಿದೆ ಸ್ಥಳೀಯ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. ಅಫಜಲಪುರದ ಜೇವರ್ಗಿಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜೇವರ್ಗಿ ಕೆ ಹಾಗೂ ಜೀವರ್ಗಿ ಬಿ ಗ್ರಾಮಗಳ ಸಂಪರ್ಕ ಕಟ್ ಆಗಿದೆ. ನದಿಯ ನೀರು ಹೊಲಗಳಿಗೆ ನುಗ್ಗಿ ಸಾವಿರಾರು ಬೆಳೆ ನಾಶವಾಗಿದೆ. ಸರ್ಕಾರ ಸರ್ವೇ ಮಾಡಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮಳೆಯಿಂದಾಗಿ ಗ್ರಾಮಸ್ಥರ ಜನ ಜೀವನ ಸಂಪೂರ್ಣ ಅಸ್ಥವ್ಯಸ್ತವಾಗಿದೆ.