ಕಲಬುರಗಿ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದು ಹೊತ್ತಿ ಹೊಡೆದಿದ್ದು ಮನೆಯಲ್ಲಿದ್ದ ಇಪ್ಪತ್ತು ಸಾವಿರ ನಗಾದು ಚಿನ್ನಾಭರಣ ಹಾಗೂ ಗೃಹಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಡೆದಿದೆ.
ಆಳಂದ್ ತಾಲೂಕಿನಲ್ಲಿ ಶಾರ್ಟ್ ಸರ್ಕ್ಯೂಟ್ ಇಂದ ಮನೆಯೊಂದು ಹೊತ್ತಿ ಉರಿದಿದ್ದು, ಸೈಬಣ್ಣ ಎನ್ನುವವರ ಮನೆ ಇದೀಗ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ 20,000 ನಗದು ಚಿನ್ನಾಭರಣ ಹಾಗೂ ಗೃಹ ಉಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಘಟನೆ ಕುರಿತಂತೆ ಕಲಬುರ್ಗಿ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.