ಚಿಕ್ಕಮಗಳೂರು: ಶಾಲೆಯೊಂದಕ್ಕೆ ಶಿಕ್ಷಕನನ್ನು ( School Teacher ) ನಿಯೋಜಿಸೋ ಸಂಬಂಧ 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿಯೇ ರೆಡ್ ಹ್ಯಾಂಡ್ ಆಗಿಯೇ ಬಿಇಓ ಲೋಕಾಯುಕ್ತ ಬಲೆಗೆ ಇಂದು ಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿಇಓ ಕೆ ಎನ್ ಜಯಣ್ಣ ( BEO KN Jayanna ) ಎಂಬುವರು ಶಿಕ್ಷಕ ರಾಜಪ್ಪ ಎಂಬುವರಿಗೆ ಶಾಲೆಯೊಂದಕ್ಕೆ ನಿಯೋಜಿಸಲು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಬೆಂಗಳೂರಿನ ಜನತೆ ಗಮನಕ್ಕೆ: ಬಿಬಿಎಂಪಿಯಿಂದ ಕಲ್ಯಾಣ ಕಾರ್ಯಕ್ರಮಗಳಡಿ ಅರ್ಜಿಸಲ್ಲಿಕೆ ದಿನಾಂಕ ವಿಸ್ತರಣೆ
ಬಿಇಓ ಲಂಚಕ್ಕೆ ಬೇಡಿಕೆ ಇಟ್ಟಂತ ವಿಷಯವನ್ನು ಲೋಕಾಯುಕ್ತಕ್ಕೆ ( Karnataka Lokayukta ) ದೂರು ನೀಡಿದ್ದರು. ಇಂದು ಬಿಇಓಗೆ ಕಡೂರು ತಾಲೂಕಿನ ಜಿ.ತಿಮ್ಮಾಪುರ ಗೇಟ್ ಬಳಿಯಲ್ಲಿ 15 ಸಾವಿರ ಲಂಚ ನೀಡುತ್ತಿದ್ದಂತ ವೇಳೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಕಡೂರು ಬಿಇಓ ಕೆ ಎನ್ ಜಯಣ್ಣ ಎಂಬುವರನ್ನು ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿ ಬಂಧಿಸಲಾಗಿದೆ.
OMG.! ಈ ಸತ್ತ ಕೀಟ, ಮೆದುಳಿನ ಮೇಲೆ ನಿಯಂತ್ರಣ ಸಾಧಿಸಿ ನಡೆಯುತ್ತಿದೆ ಗೊತ್ತಾ.?