ಹಾವೇರಿ: ಜಿಲ್ಲೆಯ ರಾಣಿಬೆನ್ನೂರು ಮಾಜಿ ಶಾಸಕ ಕೆ.ಬಿ ಕೋಳಿವಾಡ ಅವರಿಗೆ ಫೋನ್ ಮಾಡಿ ವ್ಯಕ್ತಿಯೊಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಹೂವು ಹಾಕಲು ಬರೋಕೆ ಹೇಳಿದ್ದಾರೆ. ಈ ವೇಳೆ ಕೆ.ಬಿ ಕೋಳಿವಾಡ ಅವರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ಅವಾಚ್ಯ ಶಬ್ಧಗಳನ್ನು ಕೂಡ ಬಳಸಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ವೈರಲ್ ಆಗಿದೆ. ಐದು ಬಾರಿ ಶಾಸಕರಾಗಿರೋ ಕೋಳಿವಾಡ ಅವರು ಒಮ್ಮೆ ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇದೀಗ ಹಿರಿಯ ರಾಜಕಾರಣಿಯ ಬಾಯಲ್ಲಿ ಬಂದ ಹಗುರ ಮಾತುಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪಕ್ಷದ ಕಾರ್ಯಕ್ರಮ ಸಂಘಟನೆ ಮಾಡಲು ಮುಖಂಡರೊಬ್ಬರ ಮನೆಯಲ್ಲಿ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದಾಗ ಕೋಳಿವಾಡಗೆ ಕಾರ್ಯಕರ್ತನ ಕರೆ ಬಂದಿದೆ. ಫೋನ್ ನಲ್ಲಿ ಮಾತನಾಡಿದ ಮೇಲೆ ಕಾರ್ಯಕರ್ತರ ಮುಂದೆ ರೈತನ ಬಗ್ಗೆ ಅವಾಚ್ಯ ಶಬ್ಧ ಬಳಸಿ ಮಾತನಾಡಿದ್ದಾರೆ. ಇದಕ್ಕೆ ಗ್ರಾಮಸ್ಥರು ಕೆ.ಬಿ ಕೊಳಿವಾಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.