ಬೆಂಗಳೂರು : ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರು ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ 2025ರ ಏಪ್ರಿಲ್‌ನಲ್ಲಿ ಬಂಧನಕ್ಕೊಳಗಾಗಿದ್ದರು. ಅದಾದ ಬಳಿಕ ಇತ್ತೀಚಿಗೆ ಮತ್ತೊರ್ವ ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ಗೆ ಬೆದರಿಕೆ ಪ್ರಕರಣದಲ್ಲಿ ರಜತ್ ಕಿಶನ್ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು.
ಇದೀಗ ರಜತ್ ಕಿಶನ್ ಇನ್ಸ್ಟಾಗ್ರಾಮ್ ಅಲ್ಲಿ ನಿನ್ನೆ ಒಂದು ರೀಲ್ಸ್ ಪೋಸ್ಟ್ ಮಾಡಿದ್ದು, ಆ ಒಂದು ವಿಡಿಯೋದಲ್ಲಿ ಕ್ಯಾಪ್ಶನ್ ನಲ್ಲಿ ಇದು ಸುಮ್ಮನೆ ತಮಾಷೆಗೆ ವಿಡಿಯೋ ಶೂಟ್ ಮಾಡಿದ್ದು ಇದಕ್ಕೂ ಕೇಸ್ ಹಾಕಬೇಡರಪ್ಪ ಎಂದು ರಜತ್ ಕಿಶನ್ ಅವರು ಬರೆದುಕೊಂಡಿದ್ದಾರೆ. ಇದೀಗ ಆ ಒಂದು ವಿಡಿಯೋ ಹಾಗೂ ಅವರು ಬರೆದಿರುವ ಕ್ಯಾಪ್ಷನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಒಂದು ವಿಡಿಯೋದಲ್ಲಿ ಕೆಜಿಎಫ್ ನಲ್ಲಿ ನಟ ಯಶ್ ಅವರ ಡೈಲಾಗ್ ಬಳಸಿ ರಿಲ್ಸ್ ಮಾಡಿದ್ದು ರಜತ್ ಬೈಕ್ ಮೇಲೆ ಎಂಟ್ರಿ ಕೊಡುವ ದೃಶ್ಯದಲ್ಲಿ ಹಿಂದೆ ಬಾಂಬ್ ಬ್ಲಾಸ್ಟ್ ಆಗೋ ರೀತಿ ಬೆಂಕಿಯ ದೃಶ್ಯಗಳು ಇವೆ. ಹಾಗಾಗಿ ರಜತ್ ಕಿಶನ್ ಅವರು ಇದು ಸುಮ್ನೆ ತಮಾಷೆಗಾಗಿ ವಿಡಿಯೋ ಶೂಟ್ ಮಾಡಿದ್ದು ಇದಕ್ಕೂ ಬಂದು ಕೇಸ್ ಹಾಕ್ಬೇಡ್ರಪ್ಪೋ ಎಂದು ಮನವಿ ಮಾಡಿಕೊಂಡಿದ್ದಾರೆ. ಕೆಲವರು ವಿಡಿಯೋಗಿಂತ ಕ್ಯಾಪ್ಶನ್ ಸಕತ್ತಾಗಿದೆ ಎಂದು ತಮಾಷೆ ಮಾಡಿದ್ರೆ ಇನ್ನೂ ಕೆಲವರು ಪರಿಸರ ಹಾನಿ, ಸಾರ್ವಜನಿಕರಿಗೆ ಕಿರಿಕಿರಿ ಅಂತ ಯಾರಾದರೂ ಹಾಕಿದ್ರೆ ಹೇಗೆ ಅಂತ ರಜತ್ ಕಿಶನ್ ಅವರ ಕಾಲು ಎಳೆದಿದ್ದಾರೆ.
ಹಳೆ ಕೇಸ್ ಹಿನ್ನೆಲೆ ಏನು?
ಮಚ್ಚು ರೀಲ್ಸ್ ವಿವಾದ: ರಜತ್ ಮತ್ತು ವಿನಯ್ ಗೌಡ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಆರೋಪದ ಮೇಲೆ ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪೊಲೀಸರ ತನಿಖೆ: ಅವರು ಬಳಸಿದ್ದು ಫೈಬರ್ ಮಚ್ಚು ಎಂದು ಹೇಳಲಾಗಿತ್ತಾದರೂ, ವಿಡಿಯೋದಲ್ಲಿ ಕಂಡುಬಂದ ಮಚ್ಚು ಮತ್ತು ಸರೆಂಡರ್ ಮಾಡಿದ ಮಚ್ಚು ಬೇರೆ ಬೇರೆಯಾಗಿದ್ದರಿಂದ ತನಿಖೆ ತೀವ್ರಗೊಂಡಿತ್ತು.
ಬಂಧನ ಮತ್ತು ಜಾಮೀನು: ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ರಜತ್‌ಗೆ 24ನೇ ಎಸಿಜೆಎಂ ಕೋರ್ಟ್ ನಂತರ ಜಾಮೀನು ಮಂಜೂರು ಮಾಡಿತ್ತು.








