Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

04/03/2026 9:09 AM

WATCH VIDEO : `ಗ್ಯಾಸ್ ಸಿಲಿಂಡರ್’ ಯಾವಾಗ ಖಾಲಿಯಾಗುತ್ತೆ ಅಂತ ಚಿಂತೆಯೇ? ಇಲ್ಲಿದೆ ನೋಡಿ 2 ನಿಮಿಷದ ಮ್ಯಾಜಿಕ್ ಟ್ರಿಕ್!

04/03/2026 9:03 AM

​ಯುದ್ಧದ ಭೀತಿ: ದುಬೈನಿಂದ ಹೊರಬರಲು ಖಾಸಗಿ ಜೆಟ್‌ಗೆ 3.2 ಕೋಟಿ ರೂ. ನೀಡಿದ ಅತಿಮಹಾನ್ ಶ್ರೀಮಂತರು!

04/03/2026 8:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಚ್ಚೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ 14 ಜೋಡಿಗೆ ಮರು ಹೊಂದಾಣಿಕೆ ಮಾಡಿದ ನ್ಯಾಯಾಧೀಶರು!
KARNATAKA

ವಿಚ್ಚೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ 14 ಜೋಡಿಗೆ ಮರು ಹೊಂದಾಣಿಕೆ ಮಾಡಿದ ನ್ಯಾಯಾಧೀಶರು!

By kannadanewsnow5717/09/2024 7:17 AM

ಕೊಪ್ಪಳ : ಕೋರಿದ್ದು ವಿಚ್ಚೇಧನ.. ಸಿಕ್ಕಿದ್ದು ಮರು ಬೆಸುಗೆ ಸಂಧಾನ.. ! ಹದಿನಾಲ್ಕು ಜೋಡಿಗಳಿಗೆ ಮರು ಹೊಂದಾಣಿಕೆ ಮಾಡಿದ ನ್ಯಾಯಾಧೀಶರು ಹಾಗೂ ವಕೀಲರು..!

ಹೌದು.. ! ಗೌರವಾನ್ವಿತ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ ಅವರು ವಿಶೇಷ ಮುತುವರ್ಜಿ ವಹಿಸಿ ಸೆ.14ರಂದು ಆಯೋಜನೆ ಮಾಡಿದ್ದ ರಾಷ್ಟೀಯ ಲೋಕ್ ಅದಾಲತ್ ಕಾರ್ಯಕ್ರಮವು ಇಂತಹ ವಿಶೇಷತೆಯ ಮೂಲಕ ಹೊಸ ಇತಿಹಾಸ ಬರೆಯಿತು. ರಾಜೀ ಸಂಧಾನದ ಮೂಲಕ ಹೆಚ್ಚಿನ ಪ್ರಕರಣಗಳು ಇತ್ಯಾರ್ಥವಾಗಿದ್ದು ಈ ಲೋಕ ಅದಾಲತ್‌ನ ವಿಶೇಷತೆಯಾಗಿತ್ತು.

ಕೌಟುಂಬಿಕ ಭಿನ್ನಾಭಿಪ್ರಾಯ, ಹಣಕಾಸು ಸಮಸ್ಯೆ, ಕುಡಿತ, ಸೋಮಾರಿತನ, ಅನುಮಾನ ಹೀಗೆ ನಾನಾ ಕಾರಣಕ್ಕೆ ಸಂಸಾರದಲ್ಲಿನ ಸಮಸ್ಯೆಯಿಂದ ವಿಚ್ಛೇಧನ ಕೋರಿ ಹದಿನಾಲ್ಕು ಜೋಡಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಸೆ.14ರಂದು ಕೊಪ್ಪಳ ಜಿಲ್ಲೆಯಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳ ಆವರಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನಾಲ್ಕು ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಹಾಗೂ ವಕೀಲರು ಸೇರಿ ಸಮಸ್ಯೆಯ ಬಗ್ಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ಹದಿನಾಲ್ಕು ಜೋಡಿಗಳ ಸಂಸಾರದಲ್ಲಿನ ಅಪಸವ್ಯವನ್ನು ಹೋಗಲಾಡಿಸಿದರು.

ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ಪೈಕಿ ಕೊಪ್ಪಳ ನ್ಯಾಯಾಲಯದಲ್ಲಿ ಐದು ಜೋಡಿಗಳು, ಗಂಗಾವತಿ ತಾಲೂಕಿನಲ್ಲಿ ಎಂಟು ಜೋಡಿಗಳು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಒಂದು ಜೋಡಿಯು ಸಿಡಿಲು ಬಡಿದಂತೆ ಸಮಸ್ಯೆಯನ್ನು ಹೊತ್ತು ನ್ಯಾಯಾಲಯಕ್ಕೆ ಬಂದಿದ್ದರು. ಈ ಹದಿನಾಲ್ಕು ಜೋಡಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ ನ್ಯಾಯಾಧೀಶರು ಹಾಗೂ ವಕೀಲರು, ಮರು ಹೊಂದಾಣಿಕೆ ಮಾಡಿ ಸುಳಿಗಾಳಿಗೆ ಸಿಲುಕಿದ್ದ ಸಂಸಾರಗಳನ್ನು ಹಾಲು ಜೇನಿನಂತೆ ಮತ್ತೆ ಹೊಂದಾಣಿಕೆ ಮಾಡಿದರು.

ಇದು ಕಥೆಯಲ್ಲ ಜೀವನ ಎಂದು ನ್ಯಾಯಾಧೀಶರು ಮತ್ತು ವಕೀಲರು ಆ ಜೋಡಿಗಳಿಗೆ ಅರಿವಿನ ಜ್ಞಾನ ಮೂಡಿಸಿದರು. ಅಜ್ಞಾನದ ದಾರಿಯನ್ನು ತಪ್ಪಿಸಿ ಜೀವನದ ಪಯಣದತ್ತ ಸಾಗಲು ತಿಳಿಸಿದ ಕೊಪ್ಪಳ ಜಿಲ್ಲೆಯ ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ವಕೀಲರುಗಳ ಸಮ್ಮುಖದಲ್ಲಿ ನ್ಯಾಯಾಲಯಗಳಲ್ಲಿನ ಆವರಣದಲ್ಲಿ ಸಾರ್ವಜನಿಕರ ಎದುರಿನಲ್ಲಿ ಹೂವಿನ ಹಾರ ಬದಲಿಸಿಕೊಂಡು ಸಂಸಾರದ ಮತ್ತೊಂದು ಮಗ್ಗಲಿಗೆ 14 ಜೋಡಿಗಳು ಹೊಸ ಹೆಜ್ಜೆ ಹಾಕಿದರು.

3328 ಪ್ರಕರಣಗಳು ಇತ್ಯರ್ಥ : ಇದೆ ಸಂದರ್ಭದಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂಎAಆರ್‌ಡಿ ಪ್ರಕರಣಗಳು ಹಾಗೂ ಇತ್ಯಾದಿ ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ಒಟ್ಟು 4182 ಪ್ರಕರಣಗಳ ಪೈಕಿ 3328 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ದಾಖಲೆಯ ಮೌಲ್ಯ : ವಿಮೆ, ನೀರಿನ ಬಿಲ್, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳ ಇತ್ಯರ್ಥ ಮಾಡಲಾದ ಒಟ್ಟು ಮೌಲ್ಯ 55,38,75,322 ಆಗಿರುತ್ತದೆ. ಹಾಗೂ ಪೂರ್ವ ದಾವೇ ಪ್ರಕರಣಗಳಿಗೆ ಸಂಬAಧಿಸಿದAತೆ ಒಟ್ಟು 35,403 ಪ್ರಕರಣಗಳ ಪೈಕಿ 32,393 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥ ಪಡಿಸಲಾದ ಒಟ್ಟು ಮೌಲ್ಯ 2,40,85,455 ಇದ್ದು, ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 39,583 ಪ್ರಕರಣಗಳ ಪೈಕಿ 35,721 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಪಡಿಸಲಾದ ಒಟ್ಟು ಮೌಲ್ಯ 57,79,60,777 ಇರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಶ್ರೀ ಮಹಾಂತೇಶ ಎಸ್ ದರಗದ ಅವರು ತಿಳಿಸಿದ್ದಾರೆ.

Judge rereconciles 14 couples who had approached court for divorce ವಿಚ್ಚೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ 14 ಜೋಡಿಗೆ ಮರು ಹೊಂದಾಣಿಕೆ ಮಾಡಿದ ನ್ಯಾಯಾಧೀಶರು!
Share. Facebook Twitter LinkedIn WhatsApp Email

Related Posts

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

04/03/2026 9:09 AM1 Min Read

WATCH VIDEO : `ಗ್ಯಾಸ್ ಸಿಲಿಂಡರ್’ ಯಾವಾಗ ಖಾಲಿಯಾಗುತ್ತೆ ಅಂತ ಚಿಂತೆಯೇ? ಇಲ್ಲಿದೆ ನೋಡಿ 2 ನಿಮಿಷದ ಮ್ಯಾಜಿಕ್ ಟ್ರಿಕ್!

04/03/2026 9:03 AM2 Mins Read

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಸರ್ಕಾರದಿಂದ ಮಾರ್ಗಸೂಚಿ ಪ್ರಕಟ !

04/03/2026 8:50 AM1 Min Read
Recent News

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

04/03/2026 9:09 AM

WATCH VIDEO : `ಗ್ಯಾಸ್ ಸಿಲಿಂಡರ್’ ಯಾವಾಗ ಖಾಲಿಯಾಗುತ್ತೆ ಅಂತ ಚಿಂತೆಯೇ? ಇಲ್ಲಿದೆ ನೋಡಿ 2 ನಿಮಿಷದ ಮ್ಯಾಜಿಕ್ ಟ್ರಿಕ್!

04/03/2026 9:03 AM

​ಯುದ್ಧದ ಭೀತಿ: ದುಬೈನಿಂದ ಹೊರಬರಲು ಖಾಸಗಿ ಜೆಟ್‌ಗೆ 3.2 ಕೋಟಿ ರೂ. ನೀಡಿದ ಅತಿಮಹಾನ್ ಶ್ರೀಮಂತರು!

04/03/2026 8:59 AM

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಸರ್ಕಾರದಿಂದ ಮಾರ್ಗಸೂಚಿ ಪ್ರಕಟ !

04/03/2026 8:50 AM
State News
KARNATAKA

BREAKING : ಹಾವೇರಿಯಲ್ಲಿ ಘೋರ ದುರಂತ : ಕೊಟ್ಟಿಗೆಗೆ ಬೆಂಕಿ  ಬಿದ್ದು 30 ಕುರಿಗಳು ಸಜೀವ ದಹನ !

By kannadanewsnow5704/03/2026 9:09 AM KARNATAKA 1 Min Read

ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಾದ್ಯಂತ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ಹರನಗಿರಿಯಲ್ಲಿ ಭೀಕರ…

WATCH VIDEO : `ಗ್ಯಾಸ್ ಸಿಲಿಂಡರ್’ ಯಾವಾಗ ಖಾಲಿಯಾಗುತ್ತೆ ಅಂತ ಚಿಂತೆಯೇ? ಇಲ್ಲಿದೆ ನೋಡಿ 2 ನಿಮಿಷದ ಮ್ಯಾಜಿಕ್ ಟ್ರಿಕ್!

04/03/2026 9:03 AM

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಸರ್ಕಾರದಿಂದ ಮಾರ್ಗಸೂಚಿ ಪ್ರಕಟ !

04/03/2026 8:50 AM

ಮಾಟ ಮಂತ್ರ ಮಾಡಿರುವುದನ್ನು ತಿಳಿಯುವುದು ಹೇಗೆ?

04/03/2026 8:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.