Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೀಲ್ಸ್ ಹುಚ್ಚಿಗೆ ರೈಲ್ವೇ ಆಸ್ತಿ ನಾಶ: ಚಲಿಸುವ ರೈಲಿನಲ್ಲೇ ಸೀಟು ಹರಿದು ವಿಕೃತಿ ಮೆರೆದ ಯುವಕ; ವಿಡಿಯೋ ನೋಡಿ ನೆಟ್ಟಿಗರು ಫುಲ್ ಗರಂ!

03/05/2026 7:51 PM

ಹೆಚ್ಚು ‘ಆತ್ಮೀಯ’ವಾಗಿ ಮಾತನಾಡುವ AI ಚಾಟ್‌ಬಾಟ್‌ಗಳೇ ಡೇಂಜರ್; ಶೇ. 60ರಷ್ಟು ಹೆಚ್ಚು ತಪ್ಪು ಮಾಹಿತಿ ನೀಡುವ ಸಾಧ್ಯತೆ!

03/05/2026 7:33 PM

Shocking: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು 2 ಕಿ.ಮೀ ಎಳೆದುಕೊಂಡು ಹೋದ ಕಿರಾತಕ ಚಾಲಕ!

03/05/2026 7:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ : ಬಕೆಟ್ ನಲ್ಲಿ ಮುಳುಗಿ ಮಗು ಸಾವು, ಮನನೊಂದು ತಾಯಿ ಆತ್ಮಹತ್ಯೆ!
KARNATAKA

SHOCKING : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ : ಬಕೆಟ್ ನಲ್ಲಿ ಮುಳುಗಿ ಮಗು ಸಾವು, ಮನನೊಂದು ತಾಯಿ ಆತ್ಮಹತ್ಯೆ!

By kannadanewsnow5702/04/2026 12:02 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ 11 ತಿಂಗಳ ಮಗು ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದ್ದು, ಮಗುವಿನ ಸಾವಿನಿಂದ ಮರುಗಿದ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಸಂಭವಿಸಿದೆ.

ಘಟನೆಯ ಹಿನ್ನೆಲೆ:
ಮೃತ ತಾಯಿಯನ್ನು ಪ್ರತಿಭಾ (29) ಎಂದು ಗುರುತಿಸಲಾಗಿದೆ. ಇವರು ಮತ್ತು ಪತಿ ಮಹಾಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಮಗು ಅಗಸ್ತ್ಯ (11 ತಿಂಗಳು) ಮನೆಯಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

ನಡೆದಿದ್ದೇನು?

ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಪ್ರತಿಭಾ ಮತ್ತು ಮಗು ಮಾತ್ರ ಇದ್ದರು. ಪತಿ ಮಹಾಂತೇಶ್ ಕೆಲಸದ ನಿಮಿತ್ತ ಹೊರಹೋಗಿದ್ದರು.

ಪ್ರತಿಭಾ ಅವರು ಒಣಗಿದ ಬಟ್ಟೆಗಳನ್ನು ತರಲು ಹೋದ ಸಂದರ್ಭದಲ್ಲಿ, ಮಗು ಅಗಸ್ತ್ಯ ತೆವಳುತ್ತಾ ಬಾತ್‌ರೂಮ್‌ಗೆ ಹೋಗಿದೆ.

ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮಗು ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದಿದ್ದು, ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಡೆತ್ ನೋಟ್ ಬರೆದಿಟ್ಟು ತಾಯಿ ಆತ್ಮಹತ್ಯೆ:
ಬಟ್ಟೆ ತರಲು ಹೋಗಿ ವಾಪಸ್ ಬಂದ ತಾಯಿಗೆ ಮಗು ನೀರಿನ ಬಕೆಟ್‌ನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ಹೊರತೆಗೆದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ತನ್ನ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂಬ ತೀವ್ರ ಅಪರಾಧ ಪ್ರಜ್ಞೆ ಮತ್ತು ಮಗುವಿನ ವಿಯೋಗ ತಾಳಲಾರದೆ ಪ್ರತಿಭಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್ ನೋಟ್‌ನಲ್ಲಿ ಏನಿದೆ?
“ನಾನು ಬಟ್ಟೆ ತರಲು ಹೋದಾಗ ಈ ಘಟನೆ ನಡೆಯಿತು. ಮಗುವಿನ ಸಾವಿಗೆ ನಾನೇ ಕಾರಣ, ಹಾಗಾಗಿ ನಾನು ಬದುಕಿರಲು ಇಚ್ಛಿಸುವುದಿಲ್ಲ” ಎಂದು ಪ್ರತಿಭಾ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಸಾವಿಗೂ ಮುನ್ನ ನಡೆಸಿದ ಹರಸಾಹಸ:
ಘಟನಾ ಸ್ಥಳದಲ್ಲಿ 15 ಮಾತ್ರೆಗಳ ಖಾಲಿ ಶೀಟ್ ಪತ್ತೆಯಾಗಿದ್ದು, ಪ್ರತಿಭಾ ಅವರು ಮೊದಲು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಕೈ ಕುಯ್ದುಕೊಂಡು ಪ್ರಾಣ ಬಿಡಲು ಯತ್ನಿಸಿದ್ದಾರೆ. ಆದರೆ ರಕ್ತ ಹೆಚ್ಚಾಗಿ ಬಾರದ ಕಾರಣ, ಅಂತಿಮವಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಕೆಲಸ ಮುಗಿಸಿ ಮನೆಗೆ ಮರಳಿದ ಪತಿ ಮಹಾಂತೇಶ್‌ಗೆ ಹೆಂಡತಿ ಮತ್ತು ಮಗು ಇಬ್ಬರೂ ಶವವಾಗಿ ಕಂಡುಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಚಂದ್ರಾ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

heartbroken mother commits suicide! SHOCKING: Heartbreaking incident in Bengaluru: Child dies after drowning in bucket
Share. Facebook Twitter LinkedIn WhatsApp Email

Related Posts

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM1 Min Read

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM2 Mins Read

ಯಾವುದೇ ಕಾರಣಕ್ಕೂ ‘ಅಣುಸ್ಥಾವರ’ಕ್ಕೆ ಅವಕಾಶ ನೀಡುವುದಿಲ್ಲ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಘೋಷಣೆ

03/05/2026 7:01 PM2 Mins Read
Recent News

ರೀಲ್ಸ್ ಹುಚ್ಚಿಗೆ ರೈಲ್ವೇ ಆಸ್ತಿ ನಾಶ: ಚಲಿಸುವ ರೈಲಿನಲ್ಲೇ ಸೀಟು ಹರಿದು ವಿಕೃತಿ ಮೆರೆದ ಯುವಕ; ವಿಡಿಯೋ ನೋಡಿ ನೆಟ್ಟಿಗರು ಫುಲ್ ಗರಂ!

03/05/2026 7:51 PM

ಹೆಚ್ಚು ‘ಆತ್ಮೀಯ’ವಾಗಿ ಮಾತನಾಡುವ AI ಚಾಟ್‌ಬಾಟ್‌ಗಳೇ ಡೇಂಜರ್; ಶೇ. 60ರಷ್ಟು ಹೆಚ್ಚು ತಪ್ಪು ಮಾಹಿತಿ ನೀಡುವ ಸಾಧ್ಯತೆ!

03/05/2026 7:33 PM

Shocking: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು 2 ಕಿ.ಮೀ ಎಳೆದುಕೊಂಡು ಹೋದ ಕಿರಾತಕ ಚಾಲಕ!

03/05/2026 7:28 PM

ಮತ ಎಣಿಕೆಗೂ ಮುನ್ನ ದೀದಿ ಅಲರ್ಟ್: ಭವಾನಿಪುರದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರ ಜೊತೆ ಮಮತಾ ಬ್ಯಾನರ್ಜಿ ತುರ್ತು ಸಭೆ!

03/05/2026 7:15 PM
State News
KARNATAKA

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

By kannadanewsnow0903/05/2026 7:15 PM KARNATAKA 1 Min Read

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ದಶಕಗಳಿಂದ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ವಿಳಂಬದಂತಹ ಅಕ್ರಮಗಳಿಗೆ…

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM

ಯಾವುದೇ ಕಾರಣಕ್ಕೂ ‘ಅಣುಸ್ಥಾವರ’ಕ್ಕೆ ಅವಕಾಶ ನೀಡುವುದಿಲ್ಲ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಘೋಷಣೆ

03/05/2026 7:01 PM

BREAKING: ರಾಜ್ಯದ 7 ಖಾಸಗಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ದೂರು

03/05/2026 6:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.