ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಉದ್ಯೋಗಾಂಕ್ಷಿಗಳೇ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಸೀನಿಯರ್ ಜಿಯಾಲಾಜಿಸ್ಟ್ 1 ಹಾಗೂ ಜೂನಿಯರ್ ಜಿಯಾಲಾಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸೀನಿಯರ್ ಜಿಯಾಲಾಜಿಸ್ಟ್ ಹುದ್ದೆಗೆ ಗರಿಷ್ಠ 50 ವರ್ಷ ಮೀರಿರಬಾರದು ಹಾಗೂ ಎಂಎಸ್ಸಿ / ಎಂಟೆಕ್ ಇನ್ ಇನ್ ಜಿಯೋಲಜಿ / ಅಪ್ಲೈಡ್ ಜಿಯೋಲಜಿ ಪಾಸ್ ಮಾಡಿರಬೇಕು. ಕನಿಷ್ಠ 10ವರ್ಷ ಅನುಭವ ಪಡೆದಿರಬೇಕು.
ಜೂನಿಯರ್ ಜಿಯಾಲಾಜಿಸ್ಟ್ ಹುದ್ದೆಗೆ ಗರಿಷ್ಠ 35 ವರ್ಷ ಮೀರಿರಬಾರದು. ಹಾಗೂ ಎಂಎಸ್ಸಿ / ಎಂಟೆಕ್ ಇನ್ ಜಿಯಾಲಾಜಿ ಪಾಸ್ ಆಗಿರಬೇಕು ಮತ್ತು 3 ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು
ಸೀನಿಯರ್ ಜಿಯಾಲಾಜಿಸ್ಟ್ ಹುದ್ದೆಗೆ ರೂ.80,000/ ಹಾಗೂ ಜೂನಿಯರ್ ಜಿಯಾಲಾಜಿಸ್ಟ್ ಹುದ್ದೆಗೆ ರೂ.40,000/- ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು https://projectrecruit.bmrc.co.in/frmApplFillTab.aspx?ND=55 ಭೇಟಿ ನೀಡಬಹುದಾಗಿದೆ, ಕೊನೆಯ ಹಂತದ ನಮೂನೆಯನ್ನು ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್, ಮೂರನೇ ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ, ಶಾಂತಿನಗರ, ಬೆಂಗಳೂರು- 560027. ಅರ್ಜಿಯನ್ನು ಸೆಪ್ಟೆಂಬರ್ 29, 2022, ಸಂಜೆ 4 .00 ರೊಳಗಾಗಿ ನೀಡಬೇಕು.
BIGG NEWS: ಕಲಬುರಗಿಯಲ್ಲಿ ಮರಳು ಸಾಗಣೆಗೆ ಲಂಚ ಪಡೆಯುತ್ತಿದ್ದ ಮೂವರು ಲೋಕಾಯುಕ್ತರ ಬಲೆಗೆ