ಶಿವಮೊಗ್ಗ : ಜಿಲ್ಲೆಯ ಗೃಹ ರಕ್ಷಕ ದಳದ ಘಟಕದಲ್ಲಿ ಖಾಲಿ ಇರುವ ಒಟ್ಟು 240 ಗೃಹರಕ್ಷಕ ಸದಸ್ಯರ ಸ್ಥಾನಗಳನ್ನು ನಿಷ್ಕಾಮ ಸೇವೆ ಧ್ಯೇಯದ ಅಡಿ ಸೇವೆ ಸಲ್ಲಿಸಲು ಸಿದ್ದರಿರುವ ಪುರುಷ/ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
‘ನಿವೇಶನ ನಿರೀಕ್ಷೆ’ಯಲ್ಲಿದ್ದವರಿಗೆ ಗುಡ್ ನ್ಯೂಸ್: ‘ಆಶ್ರಯ ಜಿ+2 ಮಾದರಿ ಮನೆ’ಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ 53, ಭದ್ರಾವತಿ 22, ತೀರ್ಥಹಳ್ಳಿ 10, ಸಾಗರ 20, ಹೊಸನಗರ 10, ಶಿಕಾರಿಪುರ 20, ಜೋಗ 05, ಸೊರಬ 30, ಶಿರಾಳಕೊಪ್ಪ 15, ಹೊಳೆಹೊನ್ನೂರು 20, ರಿಪ್ಪನ್ಪೇಟೆ 12, ಆನಂದಪುರಂ 10, ಹಾರನಹಳ್ಳಿ 10 ಒಟ್ಟು 240 ಗೃಹ ರಕ್ಷಕ ದಳದ ನೂತನ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನವೆಂಬರ್ ಮಾಹೆಯಲ್ಲಿ ನಡೆಸಲಾಗುವುದು. ನೋಂದಣಿಯಾದ ಎಲ್ಲಾ ಸದಸ್ಯರು ಪೊಲೀಸ್ ಇಲಾಖೆಯೊಂದಿಗೆ ಕಾನೂನು ಮತ್ತು ಶಿಸ್ತುಪಾಲನಾ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಹಾಗೂ ಎಲ್ಲ ಸದಸ್ಯರಿಗೆ ಮೂಲ ತರಬೇತಿಯನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗುತ್ತದೆ. ಪ್ರಗತಿಪರ ತರಬೇತಿಯನ್ನು ಗೃಹ ರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ ಬೆಂಗಳೂರು ಇಲ್ಲಿ ನೀಡಲಾಗುತ್ತದೆ.
BIGG NEWS ; ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಮೂರು ಕಂತುಗಳಲ್ಲಿ ಬಾಕಿ ಪಾವತಿ |7th Pay Commission
ಅಭ್ಯರ್ಥಿಯು ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು ಅರ್ಜಿ ಸಲ್ಲಿಸುವ ದಿನಾಂಕಕ್ಕೆ 19 ವರ್ಷ ತುಂಬಿರಬೇಕು. ಅರ್ಜಿಗಳನ್ನು ಸಂಬಂಧಪಟ್ಟ ಘಟಕಗಳಿಂದ ನ. 10 ರವರೆಗೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ದಿ:19/11/2022ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟರಾದ ಚಂದನ್ ಪಟೇಲ್ ಎಂ.ಪಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯರಸ್ತೆ, ಶಿವಮೊಗ್ಗ, ದೂ.ಸಂ: 08182-255630 ಇವರನ್ನು ಸಂಪರ್ಕಿಸಬಹುದು ಎಂದು