ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಭರ್ಜರಿ ಸಿಹಿಸುದ್ದಿ ನೀಡಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಗ್ರೂಪ್ ಬಿ ವೃಂದದ 229 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
BIGG NEWS : ಮುರುಘಾಮಠದ ಶ್ರೀಗಳಿಗೆ ಜಾಮೀನು ಕೋರಿ ಇಂದು ಕೋರ್ಟ್ ಮತ್ತೆ ಅರ್ಜಿ ಸಲ್ಲಿಸುತ್ತೇವೆ : ಮಠದ ಪರ ವಕೀಲ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗ್ರೂಪ್ ಬಿ ವೃಂದದಲ್ಲಿನ ಉಳಿಕೆ ಮೂಲ ವೃಂದದ ಸಹಾಯಕ ಅಭಿಯಂತರರು 129 ಹುದ್ದೆಗಳು ಮತ್ತು ಹೈದರಾಬಾದ್ ಕರ್ನಾಟಕ 59 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಸ್ತುತ ಇಲಾಖೆಯವರು ಸದರಿ ಹುದ್ದೆಗಳಿಗೆ ಉಳಿಕೆ ಮೂಲ ವೃಂದದಲ್ಲಿ ಮತ್ತೆ 100 ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
BIGG BREAKING NEWS : ಮುರುಘಾಮಠದ ಶ್ರೀಗಳಿಗೆ ಎದೆನೋವು : ಶ್ರೀಗಳು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 21-02-2022 ರಂದು ಅಧಿಸೂಚಿಸಿರುವ ಹುದ್ದೆಗಳಿಗೆ ಇದುವರೆಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿರುವುದಿಲ್ಲ. ಆದ್ದರಿಂದ ಪ್ರಸ್ತುತ ಸ್ವೀಕೃತವಾಗಿರುವ 100 ಹುದ್ದೆಗಳ ಪ್ರಸ್ತಾವನೆಯನ್ನು ಈ ಹಿಂದಿನ ದಿನಾಂಕ 21-02-2022 ರ ಅಧಿಸೂಚನೆಯಲ್ಲಿನ ಉಳಿಕೆ ಮೂಲ ವೃಂದದ 129 ಹುದ್ದೆಗಳೊಂದಿಗೆ ಸೇರ್ಪಡೆ ಮಾಡಲು ಆಯೋಗವು ನಿರ್ಣಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಒಟ್ಟು ಹುದ್ದೆಗಳನ್ನು ಪರಿಷ್ಕೃತ ವರ್ಗೀಕರಣವನ್ನು ಪ್ರಕಟಿಸಲಾಗಿದೆ.