ಬಿಹಾರ: ಎನ್ ಡಿಎ ಜೊತೆಗಿನ ಮೈತ್ರಿಯಿಂದ ಹೊರ ಬಂದು, ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ( Nitish Kumar ) ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ, ಜೆಡಿಯು ಜೊತೆ ಸೇರಿ ಸರ್ಕಾರ ರಚಿಸೋದಕ್ಕೆ ರಾಜ್ಯಪಾಲರಿಗೆ ಹಕ್ಕು ಮಂಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ನಿತೀಶ್ ಕುಮಾರ್ ಅವರು, ನಾವು 164 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಮತ್ತು ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇವೆ, ಅವರು ಯಾವಾಗ ಪ್ರಮಾಣವಚನ ಸ್ವೀಕರಿಸಬಹುದು ಎಂದು ನಮಗೆ ತಿಳಿಸುತ್ತಾರೆ ಎಂದು ಹೇಳಿದ್ದಾರೆ.
I came here to meet Governor and gave my resignation. There are 7 parties including 164 MLAs along with Independents in Mahagathbandahan: Nitish Kumar at a joint presser with Tejashwi Yadav after meeting Governor pic.twitter.com/yg2Xp5NFmr
— ANI (@ANI) August 9, 2022
ಈಗ ರೂಪುಗೊಂಡಿರುವ ರಾಜ್ಯ ಚುನಾವಣೆಯ ಸಮಯದಲ್ಲಿ ಜನರು ಅದೇ ಮೈತ್ರಿಕೂಟಕ್ಕೆ ಮತ ಚಲಾಯಿಸಿದರು. ಹಿಂದಿನ ಸರ್ಕಾರ (ಬಿಜೆಪಿ-ಜೆಡಿಯು ಸರ್ಕಾರ) ಜನರ ಆದೇಶದಂತೆ ಇರಲಿಲ್ಲ, ಈಗ ರಾಜ್ಯ ಸರ್ಕಾರವು ಜನರ ಜನಾದೇಶಕ್ಕೆ ಅನುಗುಣವಾಗಿರುತ್ತದೆ ಎಂದು ಆರ್ಜೆಡಿ ಸಂಸದ ಶರದ್ ಯಾದವ್ ಹೇಳಿದ್ದಾರೆ.