ಬೆಂಗಳೂರು: ಕೆಲ ದಿನಗಳ ಹಿಂದೆ ಆರಂಭಗೊಳ್ಳಬೇಕಿದ್ದಂತ ಜೆಡಿಎಸ್ ಪಂಚರತ್ನ ಯಾತ್ರೆಯು ( JDS Pancharatna Rathayatra ) ಮಳೆಯಿಂದಾದ ಅಡ್ಡಿಯಿಂದಾಗಿ ಸ್ಥಗಿತಗೊಂಡಿತ್ತು. ಈಗ ನಾಳೆಯಿಂದ ಮತ್ತೆ ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ಯಾತ್ರೆ ಮುಂದುವರೆಯಲಿದೆ.
‘ಮೈಸೂರು ಗುಂಬಜ್’ ಹೇಳಿಕೆ ವಿಚಾರಕ್ಕೆ ನಾನು ಬದ್ದ : ಸಂಸದ ಪ್ರತಾಪ್ ಸಿಂಹ |Prathap Simha
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ( Twitter ) ಮಾಹಿತಿ ಹಂಚಿಕೊಂಡಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ( Farmer CM HD Kumaraswamy ), ನಾಳೆಯಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದ ಪಂಚರತ್ನ ರಥಯಾತ್ರೆ ( Pancharatna Rathayatra ) ಆರಂಭವಾಗಲಿದೆ. ಮುಳಬಾಗಿಲು ತಾಲೂಕಿನ ಊರುಕುಂಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಬನ್ನಿ, ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ ಎಂದು ಹೇಳಿದ್ದಾರೆ.
ನಾಳೆಯಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದ ಪಂಚರತ್ನ ರಥಯಾತ್ರೆ ಆರಂಭ.
ಮುಳಬಾಗಿಲು ತಾಲೂಕಿನ ಊರುಕುಂಟೆ ಗ್ರಾಮದಲ್ಲಿ ವಾಸ್ತವ್ಯ.
ಬನ್ನಿ, ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ.#ಪಂಚರತ್ನ_ರಥಯಾತ್ರೆ pic.twitter.com/686n0z8mUV
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 17, 2022