ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಈ ವೇಳೆ ಜೆಡಿಎಸ್ ಶಾಸಕ ಲಿಂಗೇಶ್ NPS ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಲಿಂಗೇಶ್ ಪ್ರಶ್ನೆಗೆ ಇತರರ ಸದಸ್ಯರು ಧ್ವನಿಗೂಡಿಸಿದ್ದಾರೆ.
BIGG NEWS: ರಮೇಶ್ ಜಾರಕಿಹೊಳಿ& ಕೆ.ಎಸ್.ಈಶ್ವರಪ್ಪ ಅವರ ಸಂಪರ್ಕದಲ್ಲಿದ್ದೇನೆ; ಸಿಎಂ ಬೊಮ್ಮಾಯಿ
ರಾಜ್ಯಾದ್ಯಂತ ಪೆನ್ಶನ್ ಸ್ಕೀಮ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ.NPS ಬೇಡ OPS ಜಾರಿಗೆ ತರುವಂತೆ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ.ಕಡಿಮೆ ಪೆನ್ಶನ್ ನೀಡಲಾಗ್ತಿದೆ.ಹಿಡಿಗಂಟು ನೀಡ್ತೀವಿ ಅಂತ ಹೇಳಿ ಜೂಜಿಗೆ ಬಿಟ್ಟಂತಾಗಿದೆ.ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಸದನದಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿ, ಇದೊಂದು ಗಂಭೀರವಾದ ವಿಚಾರ. ಇಡೀ ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ.ಬಜೆಟ್ ಮಾಡ್ತೀವಿ, ಹಣ ಎಲ್ಲೆಲ್ಲಿಗೆ ಹೋಗುತ್ತೆ ಅಂತ ಚರ್ಚೆ ಮಾಡ್ತೀವಿ.ರಾಜ್ಯದ ಸರ್ಕಾರಿ ನೌಕರರಿಗೆ ಹಲವು ಸೌಲಭ್ಯ ನೀಡಿದ್ದೇವೆ.TA, DA ಕಾಲಕಾಲಕ್ಕೆ ನಿಡ್ತಿದ್ದೇವೆ.
BIGG NEWS: ರಮೇಶ್ ಜಾರಕಿಹೊಳಿ& ಕೆ.ಎಸ್.ಈಶ್ವರಪ್ಪ ಅವರ ಸಂಪರ್ಕದಲ್ಲಿದ್ದೇನೆ; ಸಿಎಂ ಬೊಮ್ಮಾಯಿ
7ನೇ ಪೇ ಕಮಿಷನ್ ನೇಮಕ ಮಾಡುವ ಡಿಮ್ಯಾಂಡ್ ಇತ್ತು, ಮಾಡಿದ್ದೇವೆ.NPD 2004ರ ನೌಕರರಿಂದ ಜಾರಿಗೆ ಬಂದಿದೆ.ಇದರ ಸಾಧಕ ಭಾಧಕಗಳನ್ನು ಚರ್ಚೆ ಮಾಡಬೇಕು.
ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳೋದು ಸರ್ಕಾರದ ಅಧಿಕಾರ ಇರಬಹುದು.ಸಾರ್ವಜನಿಕ ವಲಯದಲ್ಲಿ ಇದರ ಪರಿಣಾಮ ಹೇಗೆ ಅನ್ನೋದು ಚರ್ಚೆ ಆಗಬೇಕು ಎಂದು ಹೇಳಿದ್ದಾರೆ.