ಶಿವಮೊಗ್ಗ : ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ 2023-24ನೇ ಸಾಲಿಗೆ 9ನೇ ತರಗತಿಯ 7 ಖಾಲಿಯಿರುವ ಜಾಗವನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು www.navodaya.gov.in ಅಥವಾ www.nvsadmissionclassnine.in ಮೂಲಕ ದಿನಾಂಕ: 15/10/2022 ರೊಳಗಾಗಿ ಸಲ್ಲಿಸುವಂತೆ ನವೋದಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸೈನಿಕ ಇಲಾಖೆ: ವೈದ್ಯಕೀಯ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು 2022-23ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಭಿತರ ಮಕ್ಕಳು ಕೇಂದ್ರೀಯ ಸೈನಿಕ ಮಂಡಳಿ ಮುಖಾಂತರ ವಿತರಿಸಲಾಗುವ ಸೀಟುಗಳನ್ನು ಪಡೆಯಲಿಚ್ಛಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
BIG NEWS: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ
ನೀಟ್ ಅರ್ಹತಾ ಪರೀಕ್ಷೆಯ ಫಲಿತಾಂಶದ 30 ದಿನಗಳೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಂದ ಮಾಜಿ ಸೈನಿಕ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು, ಇಲಾಖೆಯ ನಿರ್ದೇಶನಾಲಯದಿಂದ ಮೇಲು ರುಜು ಪಡೆದ ನಂತರ ಆನ್ಲೈನ್ ಮೂಲಕ ಕೆ.ಎಸ್.ಬಿ. ಜಾಲತಾಣ www.ksb.gov.in ರಲ್ಲಿ ಅವಶ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ www.ksb.gov.in ಹಾಗೂ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.