ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರಪಂಚದ ಪ್ರತಿಯೊಂದು ದೇಶವೂ ವಿಭಿನ್ನ ಕಾನೂನುಗಳನ್ನು ಹೊಂದಿದೆ. ಕೆಲವು ದೇಶಗಳಲ್ಲಿನ ಕಾನೂನುಗಳು ಬಹಳ ಆಶ್ಚರ್ಯಗೊಳಿಸುತ್ತವೆ. ಅಂತಹದ್ದೆ ಕಾನೂನು ಜಪಾನಿನಲ್ಲಿದೆ. ಈ ಕಾನೂನಿನ ಬಗ್ಗೆ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ.
ಸಾಮಾನ್ಯವಾಗಿ ಜಪಾನಿನಲ್ಲಿನ ಜನರು ತೆಳ್ಳಗಿರುತ್ತಾರೆ. ಈ ದೇಶದಲ್ಲಿ ಜನರು ದಪ್ಪವಾಗುವುದಿಲ್ಲ. ಇದಕ್ಕೆ ಅಲ್ಲಿನ ಕಾನೂನೆ ಕಾರಣ. ಜಪಾನ್ನಲ್ಲಿ ದಪ್ಪಗಿರುವುದು ಕಾನೂನುಬಾಹಿರವಾಗಿದೆ. ಹಾಗಾದ್ರೆ ಅಲ್ಲಿನ ಕಾನೂನುಗಳೇನು ಎಂಬುದನ್ನು ತಿಳಿಯೋಣ.
ವಾಕಿಂಗ್ ಸಂಸ್ಕೃತಿ
ಜಪಾನ್ನಲ್ಲಿ ದೇಹದ ತೂಕ ಹೆಚ್ಚಿಸಲು ಯಾರಿಗೂ ಅವಕಾಶವಿಲ್ಲ. ಈ ವಿಚಿತ್ರ ಕಾನೂನಿನಿಂದಾಗಿ, ಜಪಾನ್ ವಿಶ್ವದ ಅತಿ ಕಡಿಮೆ ಬೊಜ್ಜು ಪ್ರಮಾಣವನ್ನು ಹೊಂದಿದೆ. ಕಾನೂನಿನ ಹೊರತಾಗಿ ಅಲ್ಲಿನ ಜನರ ಆಹಾರ ಕ್ರಮ ಮತ್ತು ಅವರ ಸಾರಿಗೆ ವ್ಯವಸ್ಥೆ ಕೂಡ ಜನರು ತಳ್ಳಗಿರಲು ವಿಶೇಷ ಪಾತ್ರ ವಹಿಸುತ್ತದೆ. ಅಲ್ಲಿನ ಜನರ ಮೀನು, ತರಕಾರಿಗಳು ಮತ್ತು ಅನ್ನ ಆಹಾರ ಪದ್ಧತಿಯಾಗಿದೆ. ಇದಲ್ಲದೇ, ಸಾರ್ವಜನಿಕ ಸಾರಿಗೆಗಾಗಿ ದೂರದ ನಡಿಗೆ ಮತ್ತು ವಾಕಿಂಗ್ ಸಂಸ್ಕೃತಿಯಿಂದಾಗಿ ಅಲ್ಲಿನ ಜನರು ತೆಳ್ಳಗಿದ್ದಾರೆ.
ಜಪಾನ್ನಲ್ಲಿ ತಂದ ಬೊಜ್ಜಿಗೆ ಸಂಬಂಧಿಸಿದ ಈ ಕಾನೂನನ್ನು ಮೆಟಾಬೊ ಲಾ ಎಂದು ಕರೆಯಲಾಗುತ್ತದೆ. ಇದನ್ನು ಜಪಾನ್ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು 2008 ರಲ್ಲಿ ಈ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನ ಅಡಿಯಲ್ಲಿ, 40 ರಿಂದ 74 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರ ಸೊಂಟದ ಅಳತೆಯನ್ನು ಪ್ರತಿವರ್ಷ ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಪುರುಷರ ಸೊಂಟದ ಗಾತ್ರವು 33.5 ಇಂಚುಗಳು ಮತ್ತು ಪುರುಷರಿಗೆ ಇದು 35.4 ಇಂಚುಗಳಿರಬೇಕು.
ಜಪಾನ್ನಲ್ಲಿ ಈ ವಿಚಿತ್ರ ಕಾನೂನನ್ನು ಏಕೆ ತರಲಾಯಿತು?
ಜಪಾನ್ನಲ್ಲಿ ಹೆಚ್ಚಿನ ಜನಸಂಖ್ಯೆಯು ವಯಸ್ಸಾದವರಾಗಿದ್ದು, ಅವರ ಚಿಕಿತ್ಸೆಗೆ ಸರ್ಕಾರವು ಕಾರಣವಾಗಿದೆ. ಸ್ಥೂಲಕಾಯದಿಂದ ಮಧುಮೇಹದಂತಹ ಗಂಭೀರ ಕಾಯಿಲೆಗೆ ಯಾರೂ ಒಳಗಾಗಬಾರದು ಎಂಬ ಕಾರಣಕ್ಕಾಗಿ ಮೆಟಾಬೊ ಕಾನೂನನ್ನು ತರಲಾಯಿತು. ಏಕೆಂದರೆ ಇದು ಸಂಭವಿಸಿದಲ್ಲಿ ಚಿಕಿತ್ಸೆಗೆ ಸಾಕಷ್ಟು ವೆಚ್ಚವಾಗುತ್ತದೆ.
ದಪ್ಪಗಿದ್ದಕ್ಕೆ ಏನು ಶಿಕ್ಷೆ?
ಜಪಾನ್ನಲ್ಲಿ ಸ್ಥೂಲಕಾಯತೆಗೆ ಅಧಿಕೃತ ಶಿಕ್ಷೆ ಇಲ್ಲ. ಆದರೆ, ಇದರ ಹೊರತಾಗಿ ಜನರನ್ನು ತೆಳ್ಳಗೆ ಮಾಡುವ ಹಲವು ವಿಷಯಗಳಿವೆ. ಜಪಾನಿನಲ್ಲಿ ಯಾರಾದರೂ ದಪ್ಪಗಿದ್ದರೆ ತೆಳ್ಳಗಾಗಲು ಕ್ಲಾಸ್ ತೆಗೆದುಕೊಳ್ಳಬೇಕು. ಈ ತರಗತಿಗಳನ್ನು ಆರೋಗ್ಯ ವಿಮಾ ಕಂಪನಿಯು ಆಯೋಜಿಸುತ್ತದೆ. ಇದಲ್ಲದೇ ಒಬ್ಬ ದಪ್ಪಗಿರುವ ವ್ಯಕ್ತಿ ಕೆಲಸ ಮಾಡುತ್ತಿರುವ ಕಂಪನಿ, ಆ ವ್ಯಕ್ತಿಯ ಮೇಲೆ ಮಾನಸಿಕ ಒತ್ತಡ ಇರುತ್ತದೆ.
BIGG NEWS : ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ಕುರಿತು ಸಿಎಂ ಬೊಮ್ಮಾಯಿ ಹೇಳಿದ್ದೇನು..?
BIGG NEWS: ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ: ಸಚಿವ ಗೋವಿಂದ ಕಾರಜೋಳ
BREAKING NEWS : ಡಿ.23 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿ |State Cabinet meeting