ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಇಂದು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ರಾಜಕೀಯ ಅಖಾಡದಲ್ಲಿ ತಕ್ಕ ಉತ್ತರವೆಂಬುದಾಗಿ ರಾಜಕೀಯ ಚಾಣಾಕ್ಯ ರಾಘವೇಂದ್ರ ಗಂಗಾವತಿ ಹೇಳಿದ್ದಾರೆ.
ಈ ಕುರಿತಂತೆ ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಬಳ್ಳಾರಿಯಿಂದ ಬಂದು ಗಂಗಾವತಿಯಲ್ಲಿನಿಂತು ಹೊಸ ಪಕ್ಷ ಘೋಷಣೆ ಮಾಡಿ ಗಂಗಾವತಿಯಿಂದಲೆ ಸ್ಪರ್ಧೆ ಖಚಿತ ಪಡಿಸಿರುವುದು ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರಲ್ಲಿದ್ದ ಗೊಂದಲಗಳಿಗೆ ಜನಾರ್ದನ ರೆಡ್ಡಿ ತರೆಯಳೆದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಗಂಗಾವತಿ ಬಿಜೆಪಿ ಚುನಾವಣಾ ಅಖಾಡದಲ್ಲಿ ಜನಾರ್ದನ ರೆಡ್ಡಿಯನ್ನು ಎದುರಿಸಲು ಪ್ರಾಮಾಣಿಕ ಕಾರ್ಯಕರ್ತರು ಹಾಗು ನಿಷ್ಠಾವಂತ ಮುಂಖಡರ ಪಡೆ ಸನ್ನದ್ದವಾಗಿದೆ. ಬಿಜೆಪಿಯ ಗೆಲುವನ್ನು ಕಟ್ಟಿಹಾಕಲು ಸಾದ್ಯವಿಲ್ಲ ಎಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಜನಾರ್ಧನ ರೆಡ್ಡಿಯವರನ್ನು ರಾಜಕೀಯ ತಂತ್ರಗಾರಿಕೆಯ ಮೂಲಕ ಕಟ್ಟಿ ಹಾಕೋ ಕೆಲಸವನ್ನು ಮಾಡುತ್ತೇವೆ. ಬಿಜೆಪಿ ಸರ್ಕಾರದ ಅಭಿವೃದ್ಧಿ, ಮೋದಿ ಜೀಯವರ ದಕ್ಷ ದೇಶ ಪ್ರೇಮ, ಆಡಳಿತ ನಮಗೆ ಶ್ರೀರಕ್ಷೆ. ಯಾವುದೇ ಆಮಿಷಗಳಿಗೆ ಜಗ್ಗದ ಕಾರ್ಯಕರ್ತರ ಸಮೂಹದೊಂದಿಗೆ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಮುಂದಿನದಿನಗಳಲ್ಲಿ ಗಂಗಾವತಿ ರಾಜಕಾರಣದಲ್ಲಿ ರಾಜಕೀಯ ದೃವಿಕರಣಕ್ಕೆ ಕೈ ಹಾಕಿ ಮುಂದಾಳತ್ವ ವಹಿಸಿಕೊಂಡು, ಗಂಗಾವತಿ ರಾಜಕಾರಣಿಗಳ ಮುಂದಿನ ರಾಜಕೀಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಆಗಲು ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಜನಾರ್ದನ ರೆಡ್ಡಿಗೆ ತಕ್ಕ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ತನ್ನ ಪ್ರಾಣ ಸ್ನೇಹಿತ ಹೊಸ ಪಕ್ಷ ರಚನೆ ಬಗ್ಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದೇನು ಗೊತ್ತಾ?
BIGG NEWS : ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ : ಶಾಸಕ ಸಿ.ಟಿ. ರವಿ ಹೇಳಿದ್ದೇನು ಗೊತ್ತಾ?